ಶೂಟಿಂಗ್ ಟೈಂನಲ್ಲಿಯೇ ‘ರೇಮೊ’ ದಾಖಲೆ

497

ನಿರ್ದೇಶಕ ಪವನ ಒಡೆಯರ ಆ್ಯಕ್ಷನ್ ಕಟ್ ಹೇಳ್ತಿರುವ ರೇಮೊ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಶೂಟಿಂಗ್ ನಡೆಯುತ್ತಿರುವ ಟೈಂನಲ್ಲಿಯೇ ದಾಖಲೆಯೊಂದು ಈ ಚಿತ್ರ ಬರೆದಿದೆ. ಅದೇನಂದ್ರೆ ಚಿತ್ರದ ಆಡಿಯೋ ರೈಟ್ಸ್ ಮಾರಾಟ.

ಆನಂದ ಆಡಿಯೋಗೆ ಸಿನಿಮಾದ ಆಡಿಯೋ ರೈಟ್ಸ್ ಮಾರಾಟ ಮಾಡಲಾಗಿದೆ. ಅದು ದೊಡ್ಡ ಮೊತ್ತದಲಿದೆ ಅಂತಾ ಚಿತ್ರ ತಂಡ ಹೇಳಿದೆ. ಆದ್ರೆ, ಎಷ್ಟು ಅನ್ನೋದು ಬಹಿರಂಗಗೊಳಿಸಿಲ್ಲ. ಮ್ಯಾಜಿಕಲ್ ಕಂಪೋಸರ್ ಅರ್ಜುನ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಇಶಾನ ಹಾಗೂ ಆಶಿಕಾ ರಂಗನಾಥ ಜೋಡಿಯಾಗಿ ನಟಿಸ್ತಿರುವ ಸಿನಿಮಾಗೆ ಸಿ.ಆರ್ ಮನೋಹರ ಬಂಡವಾಳ ಹೂಡಿದ್ದಾರೆ. ಅದ್ಧೂರಿಯಾಗಿ ಶೂಟಿಂಗ್ ನಡೆಯುತ್ತಿದ್ದು 1 ಕೋಟಿ ವೆಚ್ಚದಲ್ಲಿ ಸೆಟ್ ನಿರ್ಮಿಸಲಾಗಿದೆಯಂತೆ.




Leave a Reply

Your email address will not be published. Required fields are marked *

error: Content is protected !!