ಪ್ರಜಾಸ್ತ್ರ ಸುದ್ದಿ
ಪಾಟ್ನಾ: ಬಸ್, ರೈಲು, ವಿಮಾನ ನಿಲ್ದಾಣಗಳಲ್ಲಿರುವ ಟಿವಿಗಳಲ್ಲಿ ಜಾಹೀರಾತು ಪ್ರದರ್ಶನವಾಗುತ್ತವೆ. ಅದೆ ರೀತಿ ಬಿಹಾರದ ಪಾಟ್ನಾ ರೈಲು ನಿಲ್ದಾಣದಲ್ಲಿ ಕಳೆದ ಮಾರ್ಚ್ 19ರಂದು ಜಾಹೀರಾತು ಪ್ರದರ್ಶನ ವೇಳೆ ಅಶ್ಲೀಲ ವಿಡಿಯೋ ಪ್ರದರ್ಶನಗೊಂಡಿದೆ. ಇದರಿಂದಾಗಿ ಪ್ರಯಾಣಿಕರೆಲ್ಲ ಮುಜುಗರಕ್ಕೆ ಒಳಗಾದರು. ಕೂಡಲೇ ರೈಲ್ವೆ ಅಧಿಕಾರಿಗಳ ಗಮನಕ್ಕೆ ಬಂದು ಪ್ರೊಟೆಕ್ಷನ್ ಫೋರ್ಸ್ ಗೆ ದೂರು ನೀಡಿದರು.
ಈ ವೇಳೆ ಪ್ರದರ್ಶನಗೊಂಡ ಅಶ್ಲೀಲ ವಿಡಿಯೋದಲ್ಲಿ ನಟಿಸಿದ ಅಮೆರಿಕ ಮೂಲದ ಪೋರ್ನ್ ಸ್ಟಾರ್ ಕೇಂಡ್ರ್ ಕ್ರಸ್ಟ್, ಇದೀಗ ಟ್ವೀಟ್ ಮಾಡಿದ್ದು ವೈರಲ್ ಆಗಿದೆ. ಇಂಡಿಯಾ ಎಂದು ಬರೆದು ಹ್ಯಾಸ್ ಟ್ಯಾಗ್ ಬಿಹಾರ್ ರೈಲ್ವೆ ಸ್ಟೇಷನ್ ಅಂತಾ ಪೋಸ್ಟ್ ಮಾಡಿದ್ದು, 4 ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದು, 600ಕ್ಕೂ ಹೆಚ್ಚು ಜನರು ಕಾಮೆಂಟ್ಸ್ ಮಾಡಿದ್ದಾರೆ. ಈ ಮೂಲಕ ಅಂದು ಪ್ಲೇ ಆದ ವಿಡಿಯೋದಲ್ಲಿ ಇರುವುದು ತಾನೆ ಎಂದು ಹೇಳಿದ್ದಾಳಂತೆ.
ಇನ್ನು ಈ ಘಟನೆ ಸಂಬಂಧ ಆರ್ ಪಿಎಫ್ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಜಾಹೀರಾತು ಗುತ್ತಿಗೆ ನೀಡಿದ್ದ ದತ್ತಾ ಕಮ್ಯುನಿಕೇಷನ್ ಸಂಸ್ಥೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜೊತೆಗೆ ಸಂಸ್ಥೆ ಜೊತೆಗಿನ ಒಪ್ಪಂದ ರದ್ದುಗೊಳಿಸಲಾಗಿದೆ. ಒಟ್ಟಿನಲ್ಲಿ ಅಂದು ನಡೆದ ಘಟನೆಯಿಂದ ರೈಲ್ವೆ ಇಲಾಖೆ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಯಿತು.