ಆರ್ ಸಿಬಿಗೆ ಎಬಿಡಿ ವಾಪಸ್

227

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವವರಲ್ಲಿ ಆರ್ ಸಿಬಿ ತಂಡದ ಮಾಜಿ ಆಟಗಾರ ಎಬಿಡಿ. ಸೌಥ್ ಆಫ್ರಿಕಾದ ಮಿಸ್ಟರ್ 360ಗೆ ಭಾರತದಲ್ಲಿ ಅಸಂಖ್ಯಾತ ಫ್ಯಾನ್ಸ್ ಇದ್ದಾರೆ. ಇಂತಹ ಸ್ಫೋಟಕ ಬ್ಯಾಟ್ಸಮನ್ ಆರ್ ಸಿಬಿಯಲ್ಲಿ ಇಲ್ಲದೆ ಇರೋದಕ್ಕೆ ಎಲ್ಲರೂ ಬೇಸರ ಮಾಡಿಕೊಂಡರು. ಇದೀಗ ವಿರಾಟ್ ಕೊಹ್ಲಿ ಎಲ್ಲರಿಗೂ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಆರ್ ಸಿಬಿ ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಸ್ವತಃ ಈ ಬಗ್ಗೆ ಹೇಳಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿರುವ ಎಬಿಡಿ ವಾಪಸ್ ಬರುತ್ತಿದ್ದಾರೆ. ಆದರೆ, ಈ ಟೂರ್ನಿಯಿಂದ ಅಲ್ಲ. ಮುಂದಿನ ಬಾರಿಯ ಐಪಿಎಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಮತ್ತೆ ಹಬ್ಬವಾಗಲಿದೆ.


TAG


Leave a Reply

Your email address will not be published. Required fields are marked *

error: Content is protected !!