ಆಲಮೇಲ ಪ.ಪಂ ಚುನಾವಣೆ: ಶೇ.78ರಷ್ಟು ಮತದಾನ

485

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಆಲಮೇಲ ಪಟ್ಟಣ ಪಂಚಾಯ್ತಿ 19 ವಾರ್ಡ್ ಗಳಿಗೆ ಇಂದು ಮತದಾನ ನಡೆಯಿತು. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ನಡೆದ ಮತದಾನ ವಿವರ ಬಂದಿದ್ದು, ಒಟ್ಟು ಶೇಕಡ 78.37ರಷ್ಟು ವೋಟಿಂಗ್ ಆಗಿದೆ.

7,513 ಪುರುಷ ಮತದಾರರಲ್ಲಿ 5,765 ಜನರು ಮತ ಹಾಕಿದ್ದಾರೆ. 7,252 ಮಹಿಳಾ ಮತದಾರರಲ್ಲಿ 5,807 ಮಹಿಳೆಯರು ಮತ ಹಾಕಿದ್ದಾರೆ. ಇತರೆ 1 ಮತ ಇದ್ದು, ವೋಟ್ ಮಾಡಿಲ್ಲ. ಒಟ್ಟು 14,766 ಮತದಾರರಲ್ಲಿ 11,572 ಜನರು ವೋಟ್ ಮಾಡುವ ಮೂಲಕ ಒಟ್ಟು ಶೇಕಡ 78.37ರಷ್ಟು ಮತದಾನವಾಗಿದೆ.

ಚುನಾವಣೆ ಕಣದಲ್ಲಿ ಒಟ್ಟು 59 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಮತಪೆಟ್ಟಿಗೆಯಲ್ಲಿ ಇವರೆಲ್ಲ ಮುಂದಿನ ರಾಜಕೀಯ ಭವಿಷ್ಯ ಭದ್ರವಾಗಿದೆ. ಡಿಸೆಂಬರ್ 30ರಂದು ಫಲಿತಾಂಶ ಬರಲಿದೆ. ಅಂದು ಇವರೆಲ್ಲ ಹಣೆ ಬರಹ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!