ಮಾಧ್ಯಮ ಮತ್ತು ಪ್ರಕಾಶನ ಕ್ಷೇತ್ರದ ಶೇ.78ರಷ್ಟು ಜನರ ಉದ್ಯೋಗಕ್ಕೆ ಕತ್ತರಿ

226

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಇದು ನಿಜಕ್ಕೂ ಅತ್ಯಂತ ಭಯಾನಕ ಸಂಗತಿಯಾಗಿದೆ. ಕಳೆದ 5 ವರ್ಷಗಳಲ್ಲಿ ಮಾಧ್ಯಮ ಮತ್ತು ಪ್ರಕಾಶನ ಕ್ಷೇತ್ರದಲ್ಲಿ ಇಡೀ ದೇಶದಲ್ಲಿ ಶೇಕಡ 78ರಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ‘ಸೆಂಟರ್ ಫಾರ್ ಮೊನಿಟರಿಂಗ್ ಇಂಡಿಯನ್ ಎಕಾನಮಿ’ಯ ಪ್ರಕಾರ ಇಂತಹದೊಂದು ಭಯಾನಕ ವರದಿ ಹೊರ ಬಿದ್ದಿದೆ.

2016ರಲ್ಲಿ 10.3 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿತ್ತು. ಈಗ ಕೇವಲ 2.3 ಲಕ್ಷ ಜನರಿಗೆ ಮಾತ್ರ ಈ ಕ್ಷೇತ್ರದಲ್ಲಿ ಉದ್ಯೋಗ ನೀಡಲಾಗಿದೆ. 2016-17 ಹಾಗೂ 2020-21ರ ನಡುವೆ ಹೋಲಿಕೆ ಮಾಡಿದರೆ ಶೇಕಡ 56ರಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. 2016-17ರಲ್ಲಿ ಪ್ರಕಾಶನ ಕ್ಷೇತ್ರದಲ್ಲಿ 8,33,115 ಜನರು ಉದ್ಯೋಗದಲ್ಲಿದ್ದರೆ, 2020-21ರಲ್ಲಿ 3,66,723 ಜನರು ಮಾತ್ರ ಉದ್ಯೋಗದಲ್ಲಿದ್ದಾರೆ. ನಿರುದ್ಯೋಗ ದರ ಜುಲೈ ಶೇಕಡ 7ರಷ್ಟಿದ್ದರೆ ಆಗಸ್ಟ್ ನಲ್ಲಿ ಶೇಕಡ 8.3ಕ್ಕೆ ಏರಿಕೆಯಾಗಿದೆ. 1.9 ಮಿಲಿಯನ್ ಜನರು ದೇಶದಲ್ಲಿ ಕೆಲಸ ಕಳೆದುಕೊಂಡಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಶೇಕಡ 8.7ರಷ್ಟು ಉದ್ಯೋಗ ಕಡಿಮೆಯಾಯಿತು. ಕೃಷಿಯೇತರ ಉದ್ಯೋಗ ಶೇಕಡ 6.8ರಷ್ಟು ಹೆಚ್ಚಾಗಿದೆ. ವ್ಯಾಪಾರ, ಸಣ್ಣ ವ್ಯಾಪಾರ ರೂಪದಲ್ಲಿ 4 ಮಿಲಿಯನ್ ಹಾಗೂ ದಿನಗೂಲಿ ರೂಪದಲ್ಲಿ 2.1 ಮಿಲಿಯನ್ ಹೆಚ್ಚಾಗಿದೆ. ಸಂಬಳದ ಉದ್ಯೋಗದಲ್ಲಿ ಶೇಕಡ 0.7ರಷ್ಟು ಹೆಚ್ಚಾಗಿದೆ. ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದ ಲಕ್ಷ ಲಕ್ಷ ಜನರ ಬದುಕು ಇಂದು ಅತಂತ್ರ ಸ್ಥಿತಿಯಲ್ಲಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದ ಪ್ರಧಾನಿ ಮೋದಿ, ಇಂದು ದೇಶದ ಜನರನ್ನು ನಿರುದ್ಯೋಗಿಯನ್ನಾಗಿ ಮಾಡುತ್ತಿದ್ದಾರೆ ಅನ್ನೋದಕ್ಕೆ ಸಿಎಂಐಇ ವರದಿ ಉದಾಹರಣೆಯಾಗಿದೆ.




Leave a Reply

Your email address will not be published. Required fields are marked *

error: Content is protected !!