ಬ್ರೇಕಿಂಗ್ ನ್ಯೂಸ್
Search

‘ಅಮರ’ ಫಸ್ಟ್ ಶೋ.. ಏನಂತಾನೆ ಪ್ರೇಕ್ಷಕ…

391

ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ನಟಿಸಿರುವ ಫಸ್ಟ್ ಸಿನಿಮಾ ಅಮರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಟ್ರೇಲರ್ ಹಾಗೂ ಸಾಂಗ್ ಮೂಲಕ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದ್ದ ಅಭಿ ಹಾಗೂ ಯಜಮಾನ ಖ್ಯಾತಿಯ ತಾನ್ಯ ಹೋಪ್ ಜೋಡಿಯ ಸಿನಿಮಾ ನೋಡಿದ ಪ್ರೇಕ್ಷಕ ಪ್ರಭು ಏನಂತಾನೆ ಗೊತ್ತಾ..

ಅಮರ ಸಿನಿಮಾ ನೋಡಿದ ಜನ ಸೂಪರ್ ಅಂತಿದ್ದಾರೆ. ಪ್ರತಿಯೊಬ್ಬರು ಮರಿ ಅಂಬಿ ಬಗ್ಗೆ ಕೊಂಡಾಡಿದ್ದಾರೆ. ಯಾರನ್ನೆ ಕೇಳಿದ್ರೂ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಅಂತಿದ್ದಾರೆ. ಇನ್ನೂ ಕೆಲವರು 100 ಡೇಸ್ ಕಂಪ್ಲೀಟ್ ಮಾಡುತ್ತೆ ಅಂತಿದ್ದಾರೆ.

ಅಂಬಿ ಅಭಿಮಾನಿಗಳು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿ ಅಭಿಮಾನಿಗಳು ಅಮರ ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ಕಥೆ ಚೆನ್ನಾಗಿದೆ. ಈಗಿನ ಟ್ರೆಂಡ್ ಗೆ ಏನು ಬೇಕೋ ಅದು ಚಿತ್ರದಲ್ಲಿದೆ. ಫ್ಯಾಮಿಲಿ ಕುತ್ಕೊಂಡು ಸಿನಿಮಾ ನೋಡಬಹುದು ಅಂತಿದ್ದಾರೆ.

ನಾಗಶೇಖರ್ ನಿರ್ದೇಶನದ ಚಿತ್ರದಲ್ಲಿ ಅಭಿಗೆ ಜೋಡಿಗೆ ತಾನ್ಯ ಹೋಪ್ ನಟಿಸಿದ್ದಾರೆ. ಡಿ ಬಾಸ್ ನಟ ದರ್ಶನ್ ಗೆಸ್ಟ್ ರೋಲ್ ನಲ್ಲಿ ಬಂದಿರೋದು ಅವರ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಇನ್ನು ದೇವರಾಜ್, ಅರುಣ್ ಸಾಗರ್, ನಿರೂಪ್ ಭಂಡಾರಿ ಸೇರಿದಂತೆ ಅನೇಕ ನಟ, ನಟಿಯರು ನಟಿಸಿದ್ದಾರೆ. ಚಿತ್ರಕ್ಕೆ ಸಂದೇಶ ನಾಗರಾಜ್ ಬಂಡವಾಳ ಹೂಡಿದ್ದಾರೆ.

ಫಸ್ಟ್ ಡೇ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಮುಂದಿನ ದಿನಗಳಲ್ಲಿ ಸಿನಿ ಪ್ರೇಕ್ಷಕರ ಹೇಗೆ ಪ್ರತಿಕ್ರಿಯೆ ನೀಡ್ತಾರೆ ಅನ್ನೋದು ತಿಳಿಯಲಿದೆ.


TAG


Leave a Reply

Your email address will not be published. Required fields are marked *

error: Content is protected !!