ಹು-ಧಾ ಇತಿಹಾಸದಲ್ಲೇ ಬಹು ದೊಡ್ಡ ಜೂಜಾಟ ರೇಡ್: ‘ಕೈ-ಕಮಲ’ ಲೀಡರ್ಸ್ ಅಂದರ್

377

ಪ್ರಜಾಸ್ತ್ರ ಅಪರಾಧ ಸುದ್ದಿ

ಧಾರವಾಡ: ಅವಳಿ ನಗರದ ಇತಿಹಾಸದಲ್ಲೇ ಬಹುದೊಡ್ಡ ಇಸ್ಪೀಟ್ ರೇಡ್ ನಡೆದಿದೆ. ಈ ವೇಳೆ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ, ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಸೇರಿ ಹಲವರ ಬಂಧನವಾಗಿದೆ. 2.5 ಕೋಟಿಗೂ ಅಧಿಕ ಹಣ ವಶ ಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗ್ತಿದೆ.

ಪೊಲೀಸ್ ವರಿಷ್ಠಾಧಿಕಾರಿಯೂ ಆಗಿರುವ ಡಿಸಿಪಿ ಪಿ.ಕೃಷ್ಣಕಾಂತ ನೇತೃತ್ವದಲ್ಲಿ ಭಾನುವಾರ ಬೆಳಗಿನ ಜಾವ ದಾಳಿ ನಡೆದಿದೆ. ಈ ವೇಳೆ ಸ್ಥಳೀಯ ಘಟಾನುಘಟಿ ರಾಜಕೀಯ ನಾಯಕರು ಸೇರಿದಂತೆ 56 ಜನರು ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ, ಕಾಂಗ್ರೆಸ್ ಮುಖಂಡ ಇಸ್ಮಾಯಿಲ ತಮಾಟಗಾರ, ಹೋಟೆಲ್ ಸಂಘದ ಮಹೇಶ ಶೆಟ್ಟಿ, ಹವಾಲಾ ಕುಳ ಸಮುಂದರ ಸಿಂಗ್ ಸೇರಿದಂತೆ ಹಲರು ಸಿಕ್ಕಿಬಿದ್ದಿದ್ದಾರೆ.

ನಗರದ ಹೊರವಲಯದಲ್ಲಿರುವ ರಮ್ಯ ರೆಸಿಡೆನ್ಸಿಯಲ್ಲಿ ಅಂದರ್-ಬಹಾರ್ ಆಡುತ್ತಿದ್ರು. ಬಂಧಿತರಿಂದ 49 ಲಕ್ಷ ರೂಪಾಯಿ, 34 ವಾಹನಗಳು ಹಾಗೂ 66 ಮೊಬೈಲಗಳನ್ನ ವಶಕ್ಕೆ ಪಡೆಯಲಾಗಿದೆ. ಹವಾಲಾ ಕುಳ ಸಮುಂದರ ಸಿಂಗ್,
ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ, ಕಾಂಗ್ರೆಸ್ ಮುಖಂಡ ಇಸ್ಮಾಯಿಲ ತಮಾಟಗಾರ, ಹೋಟೆಲ್ ಸಂಘದ ಮಹೇಶ ಶೆಟ್ಟಿ ಸೇರಿ ಬಂಧಿತರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಸ್ಪಿ ಪಿ.ಕೃಷ್ಣಕಾಂತ ತಿಳಿಸಿದ್ದಾರೆ.

ಪಕ್ಷದ ಚಟುವಟಿಕೆ ಬಂದಾಗ ಕಿತ್ತಾಡಿಕೊಳ್ಳುವ ಬಿಜೆಪಿ ತವನಪ್ಪ ಅಷ್ಟಗಿ, ಕಾಂಗ್ರೆಸ್ ನ ತಮಾಟಗಾರ ಅಂದರ್ ಬಾಹರ್ ಅಂಗಳದಲ್ಲಿ ಒಂದಾಗಿದ್ದು ಪೊಲೀಸರ ಕೈಯಲ್ಲಿ ತಗ್ಲಾಹಾಕಿಕೊಂಡಿದ್ದಾರೆ. ಬಂಧಿತರಲ್ಲಿ ಕೆಲವರನ್ನ ಪೊಲೀಸ್ ಹೆಡ್ ಕ್ವಾಟರ್ಸನಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲಿಡಲಾಗಿದೆ.

ಈ ಘಟನೆ ಹೊರತುಪಡಿಸಿ ಅವಳಿನಗರದಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣ ದಾಖಲು ಮಾಡಿ, ಲಕ್ಷಾಂತರ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಯಾವುದೇ ಮುಲ್ಲಾಜಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದಾರೆ. ಮೊನ್ನೆಯಷ್ಟೇ ಜೂಜಾಟದ ಮೇಲೆ ದಾಳಿ ಮಾಡಿ ಹನ್ನೊಂದು ಪೊಲೀಸರು ನಾಪತ್ತೆಯಾಗಿದ್ದನ್ನ ಇಲ್ಲಿ ಸ್ಮರಿಸಬಹುದು.

ಇನ್ನು ಜೂಜಾಟದಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರು ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದಾರೆ. ಇದನ್ನ ಹಿರಿಯ ನಾಯಕರು ಸಮರ್ಥನೆ ಮಾಡಿಕೊಳ್ತಾರಾ, ವಿರೋಧ ಮಾಡ್ತಾರಾ ಅನ್ನೋ ಪ್ರಶ್ನೆ ಜನರಲ್ಲಿ ಮೂಡಿದೆ.




Leave a Reply

Your email address will not be published. Required fields are marked *

error: Content is protected !!