ಗಂಡ-ಹೆಂಡ್ತಿ ಹೀಗೂ ಇರ್ತಾರೆ..!

341

ಪ್ರಜಾಸ್ತ್ರ ಲೈಫ್ ಸ್ಟೈಲ್

ಬ್ರಿಟನ್: ಜೀವನದಲ್ಲಿ ಸಂಗಾತಿ ಆಯ್ಕೆ ವಿಚಾರಕ್ಕೆ ಬಂದ್ರೆ ಸಾಕಷ್ಟು ನಿರೀಕ್ಷೆಯ ಜೊತೆಗೆ ಒಂದಿಷ್ಟು ಕಂಡಿಷನ್ಸ್ ಸಹ ಇರ್ತವೆ. ಆದ್ರೆ, ಇನ್ನು ಕೆಲವರ ಜೀವನದಲ್ಲಿ ಇದ್ಯಾವುದೂ ಇರುವುದಿಲ್ಲ. ಹೀಗಾಗಿ ಚಿತ್ರಿವಿಚಿತ್ರವಾಗಿದ್ದರೂ ಮದುವೆ ಮಾಡಿಕೊಂಡು ಚೆನ್ನಾಗಿ ಇರ್ತಾರೆ.

ಇಲ್ನೋಡಿ ಈ ದಂಪತಿಯ ನಡುವೆ ಎಷ್ಟೊಂದು ವ್ಯತ್ಯಾಸವಿದೆ. ಗಂಡ 3.7 ಅಡಿ ಇದ್ದರೆ ಹೆಂಡ್ತಿ 5.4 ಅಡಿ ಎತ್ತರವಾಗಿದ್ದಾಳೆ. ಅನುವಾಂಶಿಕ ಸಮಸ್ಯೆಯನ್ನ ಎದುರಿಸ್ತಿರುವ ಜೇಮ್ಸ್ ತನ್ಗೆ ಮದುವೆಯಾಗುತ್ತೋ ಇಲ್ವೋ ಅಂದುಕೊಂಡಿದ್ದ. ಆದ್ರೆ, ಕ್ಲೋ ಲಸ್ವೆಡ್ ಭೇಟಿಯ ಬಳಿಕ ಅವರಿಬ್ಬರ ನಿಲುವೆ ಬದಲಾಗಿದೆ.

ಜೇಮ್ಸ್(33) ಕಲಾವಿದನಾಗಿದ್ದಾನೆ. ಕ್ಲೋ(27) ಶಿಕ್ಷಕಿಯಾಗಿದ್ದಾಳೆ. ಇವರಿಬ್ಬರ ನಡುವೆ ದೈಹಿಕ ಅಂತರ ಬಿಟ್ಟರೆ ಮತ್ಯಾವುದೆ ಕೊರತೆಯಿಲ್ಲ. ಮದುವೆಯಾಗಿ 5 ವರ್ಷವಾಗಿದ್ದು ಒಬ್ಬಳು ಮಗಳಿದ್ದಾಳೆ. ಈ ದಂಪತಿ ದೈಹಿಕ ಅಂತರ ಕಾರಣಕ್ಕೆ ಜೂನ್ 2ರಂದು ಗಿನ್ನಿಸ್ ಪುಸ್ತಕದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!