ದಾಖಲೆ ಬಿಡುಗಡೆ ಮಾಡಿದ ಇಸ್ಮಾಯಿಲ್ ತಮಟಗಾರ

277

ಪ್ರಜಾಸ್ತ್ರ ಸುದ್ದಿ

ಧಾರವಾಡ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮುಸ್ಲಿಂ ಧಾರ್ಮಿಕ ಗುರು ಮೌಲ್ವಿ ತನ್ವೀರ್ ಪೀರಾ ಅವರ ಜೊತೆಗಿನ ವ್ಯವಹಾರದ ಕುರಿತು, ಕಾಂಗ್ರೆಸ್ ಮುಖಂಡ, ಧಾರವಾಡ ಅಂಜುಮಾನ್ ಸಂಸ್ಥೆ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ದಾಖಲೆ ಬಿಡುಗಡೆ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯಪುರದ ವಾರ್ಡ್ ನಂಬರ್ 3ರಲ್ಲಿ ಸಿಟಿಎಸ್ 1644/3ನಲ್ಲಿ 594 ಸ್ಕ್ವೇರ್ ಫೀಟ್ ಜಾಗವಿದೆ. ಅಲ್ಲಿ ಟೂರೆಸ್ಟ್ ಹೋಟೆಲ್ ಇದ್ದು, ಎಂ.ಎಂ ಪೀರಜಾದೆ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೆಸರಿನಲ್ಲಿದೆ ಎಂದು ಹೇಳಿ ದಾಖಲೆ ಬಿಡುಗಡೆ ಮಾಡಿದರು.

ಇಸ್ಮಾಯಿಲ್ ತಮಟಗಾರ

ಎಂ.ಎಂ ಪೀರಜಾದೆ ಮೌಲ್ವಿ ತನ್ವೀರ್ ಪೀರಾ ಅವರ ಸೋದರ ಮಾವ. ಇಷ್ಟೆಲ್ಲ ವ್ಯವಹಾರ ಅವರೊಂದಿಗೆ ಹೊಂದಿರುವ ಯತ್ನಾಳ ಅವರು ಪೀರಾ ಅವರೊಂದಿಗೆ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ದಾಖಲೆಗಳು ಇದ್ದರೆ ಕೊಡಿ ಎಂದರು. ಈಗ ಕೊಟ್ಟಿದ್ದೇವೆ. ಇದನ್ನು ನೋಡಬೇಕು ಅಂತಾ ಹೇಳಿದರು. ಈ ದಾಖಲೆಗಳ ಕುರಿತು ಶಾಸಕ ಯತ್ನಾಳ ಏನು ಹೇಳುತ್ತಾರೆ ಅನ್ನೋ ಕುತೂಹಲವಿದೆ.




Leave a Reply

Your email address will not be published. Required fields are marked *

error: Content is protected !!