ಒಬ್ಬನಿಗಾಗಿ ಇಡೀ ಥಿಯೇಟರ್ ಬುಕ್

400

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾ ರಿಲೀಸ್ ಗೆ ಕೌಂಟ್ ಡೌನ್ ಶುರುವಾಗಿದೆ. ಹೀಗಾಗಿ ಅಭಿಮಾನಿಗಳಲ್ಲಿ ಖುಷಿ ಹೆಚ್ಚಾಗಿದೆ. ಆದ್ರೆ, ಇಲ್ಲೊಬ್ಬ ಇಡೀ ಥಿಯೇಟರ್ ಬುಕ್ ಮಾಡಿದ್ದಾನೆ.

ನಾಸಿಕ್ ಮೂಲದ ಆಶೀಶ್ ಸಿಂಘಹಾಲ್ ಅನ್ನೋ ಸಲ್ಲು ಅಭಿಮಾನಿ, ಇಲ್ಲಿನ ಥಿಯೇಟರ್ ವೊಂದನ್ನ ಸಂಪೂರ್ಣವಾಗಿ ತನಗಾಗಿ ಬುಕ್ ಮಾಡಿದ್ದಾನೆ. ಜೂನ್ 5ರಂದು ರಿಲೀಸ್ ಆಗುವ ಸಿನಿಮಾವನ್ನ ಫಸ್ಟ್ ಡೇ ಫಸ್ಟ್ ಶೋ ನೋಡುವ ಸಲುವಾಗಿ ಇಷ್ಟೊಂದು ಹುಚ್ಚು ಅಭಿಮಾನ ಮೆರದಿದ್ದಾನೆ.

ಇಡೀ ಥಿಯೇಟರ್ ಬುಕ್ ಮಾಡಿದ ಅಭಿಮಾನಿ

ಭಾರತ್ ಸಿನಿಮಾದಲ್ಲಿ ಸಲ್ಮಾನ್ ಖಾನ್ 6 ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾನೆ. 18ರಿಂದ 70 ವರ್ಷದ 6 ಪಾತ್ರಗಳಲ್ಲಿ ಸಲ್ಲು ನಟಿಸಿದ್ದಾನೆ. ಸಲ್ಲುಗೆ ಜೋಡಿಯಾಗಿ ಕತ್ರೀನಾ ಕೈಫ್, ಟಬು, ದಿಶಾ ಪಟಾಣಿ, ಜಾಕಿ ಶ್ರಾಫ್, ಸುನೀಲ್ ಗೊರವರ್ ಕಾಣಿಸಿಕೊಂಡಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!