ಬಿಎಸ್ವೈ ರಾಜೀನಾಮೆಗೂ ಮೊದ್ಲು ಸಿಎಸ್ ಕಚೇರಿಯಿಂದ ಬಂದ ಸೂಚನೆ ಏನಾಗಿತ್ತು?

286

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕುರಿತಂತೆ ಸಾಕಷ್ಟು ಬೆಳವಣಿಗೆಗಳು ನಡೆದು, ಕಡೆಗೂ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. 2 ವರ್ಷದ ಸಾಧನ ಪರ್ವ ಕಾರ್ಯಕ್ರಮದ ನಂತರ ಬಿಎಸ್ವೈ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದ್ರೆ, ಇದಕ್ಕೂ ಮೊದ್ಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಸೂಚನೆಯೊಂದು ಬಂದಿತ್ತು ಎನ್ನಲಾಗ್ತಿದೆ.

ಸೋಮವಾರ ಯಾವುದೇ ಕಾರ್ಯಕ್ರಮ ಮಾಡಬಾರದು ಎಂದು ಗವರ್ನರ್ ಆದೇಶದಂತೆ ಸಿಎಸ್ ಕಚೇರಿಯಿಂದ ಸೂಚನೆ ಬಂದಿದ್ದು, ಈ ಮೂಲಕ ತಮ್ಮ ವಿಶೇಷ ಅಧಿಕಾರ ಬಳಸಿಕೊಂಡಿದ್ರು. ಆದ್ರೆ, ಬಿಎಸ್ವೈ ಸಿಟ್ಟಿನಿಂದ ಟಿಪಿ ಹರಿದು ಹಾಕಿದ್ರಂತೆ.

ಇಷ್ಟು ಮಾತ್ರವಲ್ಲ ಸೋಮವಾರ ಬೆಳಗ್ಗೆ ಯಾವುದೇ ಸರ್ಕಾರಿ ವಾಹನಗಳು ರಸ್ತೆಗಳು ಇಳಿಯಬಾರದು. ಯಾವುದೇ ಕಡತಗಳಿಗೆ ಸಹಿ ಹಾಕುವಂತಿಲ್ಲ ಎಂದು ಪ್ರೋಟೋಕಾಲ್ ಅಧಿಕಾರಿಗಳು ಆದೇಶ ಹೊರಡಿಸಿದ್ರಂತೆ. ಇದರ ನಡುವೆ ದೆಹಲಿಯಿಂದ ಪದೇ ಪದೇ ಫೋನ್ ಮಾಡುತ್ತಿದ್ದ ಪುತ್ರ ವಿಜಯೇಂದ್ರ ರಾಜೀನಾಮೆ ಕೊಡಬೇಡಿ. ಸಾಧನಾ ಸಮಾವೇಶ ಕಾರ್ಯಕ್ರಮ ಮುಂದೂಡಿ ಹೈಕಮಾಂಡ್ ಗೆ ಸೆಡ್ಡು ಹೊಡೆಯಿರಿ ಎಂದು ವಿಜಯೇಂದ್ರ ಒತ್ತಡ ಹಾಕುತ್ತಿದ್ದರು.

ರಾಜ್ಯಪಾಲರ ಕಚೇರಿ ಅಸಲಿ ಆಟ ಶುರುವಾದ ಕೂಡಲೇ ಮುಂದಾಗುವ ಅನಾಹುತ ಅರಿತು ಬಿಎಸ್ವೈ ರಾಜೀನಾಮೆ ಕೊಡಲು ಮುಂದಾದರು. ಕಡೆಗೂ ಕಾರ್ಯಕ್ರಮ ಮಾಡಿ ರಾಜೀನಾಮೆಯನ್ನ ನೀಡಿದರು. ಈಗ ಎಲ್ಲ ಬೆಳವಣಿಗೆಗಳ ನಡುವೆ ಈಗ ಚರ್ಚೆಯಲ್ಲಿರುವುದು ಯಾರು ಮುಂದಿನ ಮುಖ್ಯಮಂತ್ರಿ ಅನ್ನೋದು.




Leave a Reply

Your email address will not be published. Required fields are marked *

error: Content is protected !!