ಕೊನೆಗೂ ಸಿಂದಗಿಯ ಗೂಳಿ ಕಣ್ಣಿಗೆ ಆಪರೇಷನ್

1101

ಸಿಂದಗಿ: ಪಟ್ಟಣದಲ್ಲಿ ಕಳೆದ ಹಲವು ದಿನಗಳಿಂದ ಕಣ್ಣಿನ ಸಮಸ್ಯೆಯಿಂದ ಗೂಳಿಯೊಂದು ತಿರುಗಾಡುತಿತ್ತು. ಅದರ ಬಲಗಣ್ಣು ಸಂಪೂರ್ಣವಾಗಿ ಊದಿಗೊಂಡು ಸಾಕಷ್ಟು ಯಾತನೆ ಅನುಭವಿಸುತಿತ್ತು. ಅದು ಎಷ್ಟರ ಮಟ್ಟಿಗೆ ಅಂದ್ರೆ, ಅದರ ಕಣ್ಣುಗುಡ್ಡೆ ಆಚೆ ಬಂದು ನೇತಾಡುತಿತ್ತು. ಇದನ್ನ ನೋಡಿದ ಕೆಲ ಯುವಕರು ಪಶು ಆಸ್ಪತ್ರೆಗೆ ಸಂಪರ್ಕಿಸಿ ತುರ್ತು ಚಿಕಿತ್ಸೆ ಕೊಡಿಸಿದ್ರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಚರ್ಚೆ ಆಗ್ತಿತ್ತು.

ಈ ಮೊದಲು ಗೂಳಿಯ ಕಣ್ಣಿನ ಸ್ಥಿತಿ

ಇದನ್ನ ಇಂದು ನೋಡಿದ ಕೆಲ ಪತ್ರಕರ್ತರು, ತಹಶೀಲ್ದಾರ್ ಸಂಜೀವಕುಮಾರ ದಾಸರ ಹಾಗೂ ಪಶು ಇಲಾಖೆಯ ಡಾ.ಅವಟಿ ಅವರನ್ನ ಸಂಪರ್ಕಿಸಿ, ಅವರ ಗಮನಕ್ಕೆ ತಂದರು. ಬಳಿಕ ಗೂಳಿಯಿದ್ದ ಸ್ಥಳಕ್ಕೆ ಹೋಗಿ ಅದರ ಪರಿಸ್ಥಿತಿಯನ್ನ ಅರಿತು ಚಿಕಿತ್ಸೆ ಕೊಡಿಸುವ ನಿರ್ಧಾರಕ್ಕೆ ಬಂದ್ರು. ಇದಕ್ಕೆ ತಕ್ಷಣ ಸಂಬಂಧಿಸಿದ ತಹಶೀಲ್ದಾರ್ ಹಾಗೂ ಡಾ.ಅವಟಿ ಅವರು, ತಮ್ಮ ಸಿಬ್ಬಂದಿಯನ್ನ ಕಳುಹಿಸಿ ಗೂಳಿಯ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗುವಲ್ಲಿ ಸಹಕರಿಸಿದ್ರು.

ಚಿಕಿತ್ಸೆ ನೀಡ್ತಿರುವುದು

ಘಟನೆ ಹಿನ್ನೆಲೆ:

ಪಟ್ಟಣದ ಬಂದಾಳ ರೋಡ್, ವಿಜಯಪುರ ರಸ್ತೆ, ಎಪಿಎಂಸಿ ಗೇಟ್ ಸೇರಿದಂತೆ ಹಲವು ಕಡೆ ಈ ಗೂಳಿ ಕಾಣಿಸಿಕೊಂಡಿತ್ತು. ಆದ್ರೆ, ಇದರ ಬಗ್ಗೆ ಯಾರೂ ಸರಿಯಾಗಿ ಗಮನ ಹರಿಸಿರಲಿಲ್ಲ. ಸುಮಾರು 8 ದಿನಗಳ ಹಿಂದೆ ಶೈಲಜಾ ಸ್ಥಾಮರಮಠ ಎಂಬುವರು, ಇದನ್ನ ಗಮನಿಸಿ ತಮಗೆ ಪರಿಚಯವಿದ್ದ ಹುಡ್ಗುರಿಗೆ ಹೇಳಿದ್ದಾರೆ. ಅವರು ಪಟ್ಟಣದ ಪಶು ಆಸ್ಪತ್ರೆಗೆ ಸಂಪರ್ಕಿಸಿ ಒಂದಿಷ್ಟು ಚಿಕಿತ್ಸೆ ಕೊಡಿಸಿದ್ರು. ಮುಂದೆ ಇದನ್ನ ಕಗ್ಗೋಡದಲ್ಲಿರುವ ಗೋ ಶಾಲೆಗೆ ಬಿಡುವ ನಿರ್ಧಾರ ಮಾಡಲಾಗಿತ್ತು. ಆದ್ರೆ, ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗಿರ್ಲಿಲ್ಲ. ಆದ್ರೆ, ಇಂದು ಪತ್ರಕರ್ತರ ಜೊತೆಗೆ ಶೈಲಜಾ ಸ್ಥಾವರಮಠ ಹಾಗೂ ಕೆಲ ಯುವಕರು ಸಾಥ್ ನೀಡಿದ ಪರಿಣಾಮ, ಪಟ್ಟಣದಲ್ಲಿಯೇ ಇರುವ ಪಶು ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಇದೀಗ ಗೂಳಿಗೆ ಮೇವಿನ ಅಗತ್ಯವಾಗಿದೆ. ಸುಮಾರು ಒಂದು ವಾರಗಳ ಕಾಲ ಅದಕ್ಕೆ ಮೇವು ಒದಗಿಸಬೇಕಿದೆ. ಹೀಗಾಗಿ ಕನ್ನೊಳ್ಳಿ ಗ್ರಾಮದ ಮಲ್ಲನಗೌಡ ಪಾಟೀಲ ಎಂಬುವರು ಮೇವು ನೀಡಲು ಮುಂದೆ ಬಂದಿದ್ದಾರೆ. ಬೇರೆಯಾರಾದ್ರೂ ಸಹಾಯ ಮಾಡುವರಿದ್ರೆ ಪಶು ಆಸ್ಪತ್ರೆಗೆ ಸಂಪರ್ಕಿಸಬಹುದು.

ಗೂಳಿಯ ಅರಣ್ಯರೋಧನಕ್ಕೆ ಅಂತ್ಯ ಹಾಡಲು ತಹಶೀಲ್ದಾರ್ ಸಂಜೀವಕುಮಾರ ದಾಸರ, ಕಂದಾಯ ನಿರೀಕ್ಷಕರಾದ ಐ.ಎ ಮಕಾಂದಾರ ಹಾಗೂ ಸಿಬ್ಬಂದಿ, ಪಶು ಆಸ್ಪತ್ರೆಯ ಎಡಿ ಡಾ. ಸಿರಾಜ ಅಹ್ಮದ ಅವಟಿ, ಡಾ.ಮೂರ್ತಿ ತಡಲಗಿ, ಡಾ.ನಿಜಾಮುದ್ದೀನ ಕುಮಸಗಿ, ಡಾ.ಬಸವರಾಜ ಚೂರಿ, ಶಶಿಕಾಲ, ಶಿವಯೋಗಿ, ರಾಜು ಪಾಟೀಲ ಹಾಗೂ ಗೆಳೆಯರ ಬಳಗ ಸಹಕರಿಸಿತು.




Leave a Reply

Your email address will not be published. Required fields are marked *

error: Content is protected !!