ಸಿಎಎ ಪೌರತ್ವ ನೀಡುತ್ತೆ: ಮೋದಿ

349

ಕೊಲ್ಕತ್ತಾ: ಸಿಎಎ ಪೌರತ್ವನ್ನ ನೀಡುತ್ತದೆ. ಹೊರ್ತು ಕಿತ್ತುಕೊಳ್ಳುವುದಿಲ್ಲವೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೊಲ್ಕತ್ತಾ ರಾಮಕೃಷ್ಣ ಮಿಷನ್ ಪ್ರಧಾನಕಚೇರಿ ಬೇಲೂರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಈ ರೀತಿ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನ ರಾತ್ರಿ ಬೆಳಗಾವುದರೊಳಗೆ ಜಾರಿಗೆ ತಂದಿಲ್ಲ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಂಡಿಸಿ. ಚರ್ಚಿಸಿ, ಸದಸ್ಯರ ಅಂಗೀಕಾರ ಸಿಕ್ಕಿದ್ಮೇಲೆ ಜಾರಿಗೆ ತರಲಾಗಿದೆ. ಯುವಕರಿಗೆ ಇದರ ಬಗ್ಗೆ ತಪ್ಪಾಗಿ ಅರ್ಥೈಸಿ ದಾರಿ ತಪ್ಪಿಸಲಾಗ್ತಿದೆ. ಈ ಬಗ್ಗೆ ಅರ್ಥ ಮಾಡಿಸಬೇಕಿದೆ ಅಂತಾ ಪ್ರಧಾನಿ ಹೇಳಿದ್ರು.

ಸಿಎಎದಿಂದ ಪಾಕ್, ಬಾಂಗ್ಲಾ, ಅಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ಬಗ್ಗೆ ಈಗ ಗೊತ್ತಾಗ್ತಿದೆ ಅವರು ಎದುರಿಸ್ತಿರುವ ಸಮಸ್ಯೆಗಳ ಬಗ್ಗೆ. ಆದ್ರೆ, ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಇದನ್ನ ವಿರೋಧಿಸ್ತಿವೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಗಾಂಧಿ ಸೇರಿ ಅನೇಕ ನಾಯಕರು ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗುವ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಬೇಕೆಂದು ಅಭಿಪ್ರಾಯಪಟ್ಟಿದ್ರು ಅಂತಾ ತಿಳಿಸಿದ್ರು.




Leave a Reply

Your email address will not be published. Required fields are marked *

error: Content is protected !!