ಬ್ರೇಕಿಂಗ್ ನ್ಯೂಸ್
Search

ಬೂಮ್ರಾ, ಪೂನಂಗೆ ಬಿಸಿಸಿಐ ವಾರ್ಷಿಕ ಪ್ರಶಸ್ತಿ

345

ಬಿಸಿಸಿಐ ವಾರ್ಷಿಕ ಪ್ರಶಸ್ತಿಗಳ ಹೆಸರನ್ನ ಘೋಷಣೆ ಮಾಡಲಾಗಿದೆ. 2018-19ನೇ ಸಾಲಿನ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಗೆ ಭಾರತದ ಬೌಲರ್ ಜಸ್ಪ್ರಿತ್ ಬೂಮ್ರಾ ಆಯ್ಕೆಯಾಗಿದ್ದಾರೆ. ಪೂನಂ ಯಾದವ ಮಹಿಳಾ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ

ಬುಮ್ರಾ, ಪಾಲಿ ಉಮ್ರಿಗರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೀವಮಾನ ಸಾಧನೆಗಾಗಿ ಮಾಜಿ ಆಟಗಾರರಾದ ಕೃಷ್ಣಮಚಾರಿ ಶ್ರೀಕಾಂತ ಹಾಗೂ ಅಂಜುಮ್ ಚೋಪ್ರಾ ಅವರನ್ನ ಗುರುತಿಸಲಾಗಿದೆ. ಒಟ್ಟು 25 ಸಾಧಕರಿಗೆ ಇಂದು ಸಂಜೆ ನಡೆಯುವ ಕಾರ್ಯಕ್ರದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗ್ತಿದೆ.

2018-19ನೇ ಸಾಲಿನಲ್ಲಿ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಆಡಿದ 6 ಟೆಸ್ಟ್ ಪಂದ್ಯಗಳಲ್ಲಿ ಬೂಮ್ರಾ 34 ವಿಕೆಟ್ ಪಡೆದಿದ್ರು. 17 ಏಕದಿನ ಪಂದ್ಯಗಳಲ್ಲಿ 31 ವಿಕೆಟ್ ಉಳಿದ 7 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಇನ್ನು ಪೂನಂ ಯಾದವ್, 8 ಏಕದಿನ ಪಂದ್ಯಗಳಿಂದ 14 ವಿಕೆಟ್, 15 ಟಿ-20 ಪಂದ್ಯಗಳಿಂದ 20 ವಿಕೆಟ್ ಪಡೆದಿದ್ದಾರೆ. ಅರ್ಜುನ ಪ್ರಶಸ್ತಿ ಪಡೆದಿರುವ ಲೆಗ್ ಸ್ಪಿನ್ನರ್ ಗೆ ಬಿಸಿಸಿಐ ಪ್ರಶಸ್ತಿ ಮುಡಿಗೇರಿದೆ.




Leave a Reply

Your email address will not be published. Required fields are marked *

error: Content is protected !!