ಭಾರತೀಯ ಸೇನೆ ಸೇರಲಿವೆ ಹುಬ್ಬಳ್ಳಿ ಸಾಧಕ ನಿರ್ಮಿಸಿದ ಶಸ್ತ್ರಾಸ್ತ್ರಗಳು

260

ಪ್ರಜಾಸ್ತ್ರ ವಿಶೇಷ ಸುದ್ದಿ

ಹುಬ್ಬಳ್ಳಿ: ಹಲವು ಸಾಧಕರಿಂದಾಗಿ ವಾಣಿಜ್ಯನಗರಿ ಹುಬ್ಬಳ್ಳಿಯ ಹೆಸರು ದೇಶ ವಿದೇಶದಲ್ಲಿ ಪಸರಿಸಿದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಧಾರ್ಮಿಕ, ವೈಚಾರಿಕತೆ ಹಾಗೂ ವಿವಿಧ ರಂಗದಲ್ಲಿ ಕೂಡ ಹುಬ್ಬಳ್ಳಿಯ ಹೆಸರು ಅಜರಾಮರ. ಇದೀಗ ಹುಬ್ಬಳ್ಳಿಯ ಹೆಸರನ್ನು ಭಾರತೀಯ ಸೇನೆಯಲ್ಲಿ ಅಚ್ಚಳಿಯದಂತೆ ಉಳಿಸಲು ಇಲ್ಲೊಬ್ಬ ಸಾಧಕ ಶ್ರಮಿಸುತ್ತಿದ್ದಾನೆ. ಅಷ್ಟಕ್ಕೂ ಯಾರು ಸಾಧಕ ಯುವಕ ಆತ ಮಾಡುತ್ತಿರುವುದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ.

ಹುಬ್ಬಳ್ಳಿಯ ಯುವಕ ಅಂಕುಶ ಕೊರವಿ, ಅಸ್ತ್ರ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಸ್ವದೇಶಿ ಪಿಸ್ತೂಲ್ ಅಭಿವೃದ್ಧಿ ಪಡಿಸುತ್ತಿದ್ದಾರೆ. ಹೌದು, ಆತ್ಮ ನಿರ್ಭರ್ ಭಾರತದ ಮೊದಲ ಸ್ವದೇಶಿ ಪಿಸ್ತೂಲ್ ನ್ನು ಹುಬ್ಬಳ್ಳಿಯಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಭಾರತೀಯ ಸೇನೆಗೆ, ರಾಷ್ಟ್ರದ ಶಸಸ್ತ್ರ ಪಡೆಗಳ ಹಾಗೂ ಪೊಲೀಸ್ ಇಲಾಖೆಗೆ ತಾವೇ ಸಂಶೋಧನೆ ಮಾಡಿರುವ ವಿವಿಧ ಶಸ್ತ್ರಗಳನ್ನು ಒದಗಿಸುವ ಕನಸನ್ನು ಕಟ್ಟಿಕೊಂಡಿದ್ದಾರೆ.

ಅಟಲ್ ಡಿಫೆನ್ಸ್‌ ಸ್ಟಾರ್ಟ್ ಅಫ್ ಕಂಪನಿ ಸಿಇಒ ಅಂಕುಶ ಕೊರವಿ

ಅಟಲ್ ಎಂಬ ಹೆಸರಿನಲ್ಲಿ ಡಿಫೆನ್ಸ್‌ ಸ್ಟಾರ್ಟ್ ಅಫ್ ಕಂಪನಿಯ ಮೂಲಕ ಅಸ್ತ್ರಗಳನ್ನು ಸಿದ್ಧಪಡಿಸುತ್ತಿದ್ದು, ಭಾರತೀಯ ಸೇನೆಯನ್ನು ಬಲಪಡಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಅಟಲ್ ಪಿಸ್ತೂಲ್ ಆವಿಷ್ಕಾರ ಪರಿಸ್ಥಿತಿಗೆ ಅನುಸಾರವಾಗಿ ಫೈರ್ ಕಂಟ್ರೋಲ್ ಹೊಂದಿದೆ. ಅಲ್ಲದೇ ಸಾಕಷ್ಟು ಅಧುನಿಕ ತಂತ್ರಜ್ಞಾನದ ಬಳಕೆಯಿಂದ ಹೊಸ ಹೊಸ ಆವಿಷ್ಕಾರದಿಂದ ಹುಬ್ಬಳ್ಳಿಯ ಯುವಕ ಇಂತಹದೊಂದು ಸಾಧನೆಗೆ ಮುಂದಾಗಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗಲೇ ಇಂತಹ ಕಾರ್ಯಕ್ಕೆ ಮುಂದಾಗಿರುವ ಅಂಕುಶ ಈಗ ಭಾರತೀಯ ಸೇನೆಗೆ ಹಾಗೂ ಸಶಸ್ತ್ರ ಪಡೆಗಳ ಶಕ್ತಿಯನ್ನು ವೃದ್ಧಿಸುವ ಸದುದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ಒಟ್ಟಿನಲ್ಲಿ ಹುಬ್ಬಳ್ಳಿಯ ಸಾಧಕನ ಪರಿಶ್ರಮ ಮುಂದಿನ ದಿನಗಳಲ್ಲಿ ಸೇನೆಯ ಬತ್ತಳಿಕೆಯನ್ನು ಸೇರುವುದು ನಿಜಕ್ಕೂ ವಿಶೇಷವಾಗಿದೆ. ವಾಣಿಜ್ಯನಗರಿ ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸುವ ಮೂಲಕ ಸೇನಾ ಬಲವನ್ನು ವೃದ್ಧಿಸಲು ಶ್ರಮಿಸುತ್ತಿರುವ ಸಾಧಕನಿಗೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!