ಬ್ಯಾಟ್ ನ್ನ ಪಕ್ಕದ ಮನೆ ಹೆಂಡ್ತಿಗೆ ಹೋಲಿಕೆ: ಕ್ಷಮೆ ಕೇಳಿದ ಕಾರ್ತಿಕ

258

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ಆಟಗಾರ ದಿನೇಶ ಕಾರ್ತಿಕ, ಬ್ಯಾಟ್ ನ್ನ ಪಕ್ಕದ ಮನೆ ಹೆಂಡ್ತಿಗೆ ಹೋಲಿಕೆ ಮಾಡಿದ್ರು. ಅದು ವಿವಾದ ಆಗ್ತಿದ್ದಂತೆ ಕ್ಷಮೆ ಕೇಳಿದ್ದಾರೆ.

ಪಂದ್ಯ ವೀಕ್ಷಕರ ವಿವರಣೆಗಾರರಾಗಿದ್ದ ಸಂದರ್ಭದಲ್ಲಿ, ಬಹುತೇಕ ಬ್ಯಾಟ್ಸ್ ಮನ್ ಗಳು ತಮ್ಮ ಬ್ಯಾಟ್ ಇಷ್ಟಪಡುವುದಿಲ್ಲ. ಇನ್ನೊಬ್ಬ ಆಟಗಾರನ ಬ್ಯಾಟ್ ಇಷ್ಟಪಡ್ತಾರೆ. ಬ್ಯಾಟ್ ಗಳು ನೆರೆಮನೆ ಪತ್ನಿಯ ಹಾಗೆ ಸುಂದರವಾಗಿ ಕಾಣುತ್ತವೆ ಎಂದಿದ್ರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ.

ತಮ್ಮ ಹೇಳಿಕೆಗೆ ಕ್ಷಮೆ ಕೇಳಿರುವ ದಿನೇಶ ಕಾರ್ತಿಕ, ನಾನು ಇದನ್ನು ಉದ್ದೇಶಪೂರ್ವಕವಾಗಿ ಹೇಳಿದ್ದಲ್ಲ. ಇದಕ್ಕೆ ವಿಷಾದವಿದೆ. ನಾನು ಹಾಗೇ ಹೇಳಿದ್ದಕ್ಕೆ ಅಮ್ಮ ಹಾಗೂ ಹೆಂಡ್ತಿಯಿಂದ ಸಾಕಷ್ಟು ಬೈಯಿಸಿಕೊಂಡಿದ್ದೇನೆ. ಇದು ಮತ್ತೆ ಸಂಭವಿಸಬಾರದು ಅನ್ನೋ ಕಾರಣಕ್ಕೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!