ಮಹಾರಾಷ್ಟ್ರ, ಹರಿಯಾಣದಲ್ಲಿ ಎಲೆಕ್ಷನ್ ಕದನ

791

ನವದೆಹಲಿ: ನೆರೆಯ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಡೇಟ್ ಇಂದು ಅನೌನ್ಸ್ ಆಗಲಿದೆ. ಈ ಎರಡು ರಾಜ್ಯಗಳ ಚುನಾವಣೆ ದಿನಾಂಕವನ್ನ ಭಾರತೀಯ ಚುನಾವಣಾ ಆಯೋಗ ಇಂದು ಮಧ್ಯಾಹ್ನ ಘೋಷಣೆ ಮಾಡುವ ಸಾಧ್ಯತೆಯಿದೆ.

ಮಧ್ಯಾಹ್ನ 12ಗಂಟೆ ನಂತರ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಲಿದೆ. ಈ ವೇಳೆ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಎಲೆಕ್ಷನ್ ದಿನಾಂಕ ಘೋಸಿಸಬಹುದು. ಇಂದು ದಿನಾಂಕ ಘೋಷಣೆ ಆಯ್ತು ಅಂದ್ರೆ ನೀತಿ ಸಂಹಿತ ಜಾರಿಗೆ ಬರಲಿದೆ.

288 ವಿಧಾನಸಭೆಗಳನ್ನ ಮಹಾರಾಷ್ಟ್ರ ಹೊಂದಿದೆ. 90 ವಿಧಾನಸಭಾ ಕ್ಷೇತ್ರಗಳನ್ನ ಹರಿಯಾಣ ಹೊಂದಿದೆ. ಅಕ್ಟೋಬರ್ ತಿಂಗಳಲ್ಲಿಯೇ ಚುನಾವಣೆ ನಡೆದು ಫಲಿತಾಂಶ ಸಹ ಅದೇ ತಿಂಗಳಲ್ಲಿ ಬರುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!