ಪ್ರಿಯಕರನಿಂದಲೇ ಪ್ರೇಯಸಿ ಕೊಲೆ

344

ಪ್ರಜಾಸ್ತ್ರ ಅಪರಾಧ ಸುದ್ದಿ

ಹಾಸನ: ಪ್ರಿಯಕರನಿಂದಲೇ ಪ್ರೇಯಸಿಯ ಕೊಲೆ ನಡೆದಿರುವ ಕೃತ್ಯ ತಾಲೂಕಿನ ಕುಂತಿಗುಡ್ಡದಲ್ಲಿ ನಡೆದಿದೆ. ಸುಚಿತ್ರ(20) ಕೊಲೆಯಾದ ದುರ್ದೈವಿ. ತೇಜಸ್ ಕೊಲೆ ಆರೋಪಿಯಾಗಿದ್ದಾನೆ.

ಆಲೂರು ತಾಲೂಕಿನ ಕವಳಿಕೆರೆ ಗ್ರಾಮದ ಸುಚಿತ್ರ ಹಾಗೂ ಶಂಕರನಹಳ್ಳಿಯ ತೇಜಸ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಓದುತ್ತಿದ್ದರು. ಕಳೆದೊಂದು ವರ್ಷದಿಂದ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಅದೇನಾಗಿದೆಯೂ ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಮನಸ್ಥಾಪ ಮೂಡಿದೆ.

ನಿನ್ನೊಂದಿಗೆ ಮಾತನಾಡಬೇಕು ಬಾ ಎಂದು ಯುವತಿಗೆ ಕರೆದಿದ್ದಾನೆ. ಅವನ ಮಾತು ನಂಬಿ ಬಂದಿದ್ದಾಳೆ. ಆಗ ಕುಂತಿಗುಡ್ಡಕ್ಕೆ ಕರೆದುಕೊಂಡು ಹೋಗಿದ್ದಾನೆ. ಇಬ್ಬರು ಅಲ್ಲಿ ಜಗಳವಾಡಿಕೊಂಡಿದ್ದಾರೆ. ನಂತರ ತೇಜಸ್, ಸುಚಿತ್ರಳನ್ನು ಕೊಲೆ ಮಾಡಿದ್ದಾನೆ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿಯಾಗಿದೆ.

ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಆರೋಪಿ ತೇಜಸನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
Leave a Reply

Your email address will not be published. Required fields are marked *

error: Content is protected !!