Search

ಖ್ಯಾತ ಕವಯತ್ರಿ ಅಮೃತಾಗೆ ಗೂಗಲ್ ಗೌರವ

437

ನವದೆಹಲಿ: ಪಂಜಾಬ್ ಮೂಲದ ಕವಯತ್ರಿ ಅಮೃತಾ ಪ್ರೀತಮ್ ಅವರ ಶತಮಾನೋತ್ಸವವನ್ನ ಗೂಗಲ್ ಗೌರವಿಸಿದೆ. ತನ್ನ ಡೂಡಲ್ ನಲ್ಲಿ 20ನೇ ಶತಮಾನದ ಕವಯತ್ರಿಗೆ ಗೌರವ ಸಲ್ಲಿಸಿದೆ. ಕಪ್ಪು ಗುಲಾಬಿ ಹೂವುಗಳ ಗುಚ್ಛದ ಮುಂದೆ ಕುಳಿತು ಡೈರಿ ಬರೆಯುತ್ತಿರುವ ಚಿತ್ರವಿದೆ. ಇದು ಅಮೃತಾ ಅವರ ‘ಕಾಲಾ ಗುಲಾಬ್’ ಅಂದ್ರೆ ಕಪ್ಪು ಗುಲಾಬಿ ಅನ್ನೋ ಜೀವನಚರಿತ್ರೆಯನ್ನ ಸೂಚಿಸುತ್ತದೆ.

ಪಂಜಾಬ್ ಮೂಲದ ಮೊದಲ ಮಹಿಳಾ ಕವಯತ್ರಿ, ಕಾದಂಬರಿಗಾರ್ತಿ ಅನ್ನೋ ಖ್ಯಾತಿಯನ್ನ ಹೊಂದಿದವರು. ಪಂಜಾಬ್, ಹಿಂದಿ ಹಾಗೂ ಉರ್ದುವಿನಲ್ಲಿಯೂ ಸಹ ಕೃತಿಗಳನ್ನ ರಚನೆ ಮಾಡಿದ್ದಾರೆ. 100 ಕಾವ್ಯ ಸಂಕಲನ ಹಾಗೂ 28 ಕಾದಂಬರಿಗಳನ್ನ ಬರೆದಿದ್ದಾರೆ. 1981ರಲ್ಲಿ ಜ್ಞಾನಪೀಠ ಪ್ರಶಸ್ತಿ, 2004ಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿ, 2005ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಸೇರಿದಂತೆ ದೇಶದ ಅತ್ಯುನ್ನತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಆಗಸ್ಟ್ 31, 1919ರಲ್ಲಿ ಜನಿಸಿದ ಕವಯತ್ರಿ ಅಕ್ಟೋಬರ್ 31, 2005ರಂದು 86ನೇ ವಯಸ್ಸಿನಲ್ಲಿ ನಿಧನ ಹೊಂದಿದ್ರು.




Leave a Reply

Your email address will not be published. Required fields are marked *

error: Content is protected !!