ಸಮಾಜದ ಸಾಮರಸ್ಯಕ್ಕೆ ಕಲೆ ಒಂದು ಔಷಧಿ: ಸಂಸ್ಕೃತಿ ಚಿಂತಕ ಲಕ್ಷ್ಮಿರಾಮ್

821

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಮಾಜದಲ್ಲಿ ಸಾಮರಸ್ಯ ಬರಲು ಕಲೆ, ಸಾಹಿತ್ಯ ಔಷಧಿಯಂತೆ ಕೆಲಸ ಮಾಡುತ್ತವೆ ಎಂದು ಖ್ಯಾತ ಗಾಯಕ, ಸಂಸ್ಕೃತಿ ಚಿಂತಕ ಲಕ್ಷ್ಮಿರಾಮ್ ಹೇಳಿದರು. ನಗರದ ಸುಂಕದ ಕಟ್ಟೆಯಲ್ಲಿರುವ ಜಿಟಿ ಸಮೂಹ ವಿದ್ಯಾ ಸಂಸ್ಥೆಯಲ್ಲಿ ನಡೆದ ಸಂಪ್ರದಾಯ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಜಾನಪದ ಎಲ್ಲ ಪರಂಪರೆಗಳ ಮೂಲ. ಅಲ್ಲಿ ಪ್ರೀತಿ, ನೀತಿ, ತತ್ವ, ಸಾಮರಸ್ಯ, ಮನರಂಜನೆ ಎಲ್ಲವೂ ಇದೆ. ಅದನ್ನ ಯುವ ಪೀಳಿಗೆ ಕಲಿತು ಮುಂದುವರಿಸಬೆಕು ಎಂದರು. ಸಂಸ್ಥೆಯ ಅಧ್ಯಕ್ಷ ಎಸ್.ಟಿ  ಆನಂದ್ ಅವರು ಮಾತನಾಡಿ, ನನಗಿಂತ ನನ್ನ ತಂದೆ ತಾಯಿ ಗಳನ್ನು ಸ್ಮರಿಸಿದರೆ ಅವರ ಶ್ರಮಕ್ಕೆ ಮೌಲ್ಯ ಸಿಗುತ್ತದೆ ಎಂದರು.

ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಸತ್ಯಪ್ರಸಾದ್ ಅವರು ವಿದ್ಯಾರ್ಥಿಗಳು ಶಿಸ್ತು ಸಂಯಮ ಕಲಿತು ಬಾಳಬೇಕು ಎಂದು ಸಲಹೆ ನೀಡಿದರು. ಕಲಾವಿದ ಮೈಮ್ ಮುರುಳಿ ಸೊಗಸಾಗಿ ಮಿಮಿಕ್ರಿ ಮಾಡಿ ಜನಮನ ಸೆಳೆದರು. ಲಕ್ಷ್ಮಿರಾಮ್ ಅವರ ಗಾಯನಕ್ಕೆ  ಎಲ್ಲರೂ ಮನಸೋತರು. ಈ ವೇಳೆ ವಿದ್ಯಾಲಯದ ಸಬ್ಬಂದಿ ವರ್ಗ ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!