ಇಲ್ಲಿದೆ ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ..

268

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಎರಡು ಕ್ಷೇತ್ರದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಮಾಜಿ ಪ್ರಧಾನಿ ದೇವೇಗೌಡ ಆದಿಯಾಗಿ ರಾಜ್ಯ ನಾಯಕರು ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಇದೀಗ ಸ್ಟಾರ್ ಪ್ರಚಾರಕರ ಲಿಸ್ಟ್ ನ್ನು ಜೆಡಿಎಸ್ ರೆಡಿ ಮಾಡಿದೆ.

ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಹ್ಮದ ಜಫ್ರುಲ್ಲಾ ಖಾನ್, ಮಾಜಿ ಸಚಿವ ಎಚ್.ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಬಂಡೆಪ್ಪ ಖಾಶೇಂಪೂರ, ಡಾ.ಕೆ.ಅನ್ನದಾನಿ, ಡಾ.ದೇವಾನಂದ ಚೌವ್ಹಾಣ, ಬಿ.ಎಂ ಫಾರೂಖ್, ರಾಜ ವೆಂಕಟಪ್ಪ, ಮುಖಂಡರಾದ ಎನ್.ಎಚ್ ಕೋನರೆಡ್ಡಿ, ಯಂಡಿಗೇರಿ, ಬಿ.ಜಿ ಪಾಟೀಲ, ನಾಜೀರ್ ಹುಸೇನ್ ಹುಸ್ತಾದ್, ಸಯ್ಯದ್ ಮೋಹಿದ್ ಅಲ್ತಾಪ್, ರಾಜುಗೌಡ ಪಾಟೀಲ, ಬಿ.ಡಿ ಪಾಟೀಲ, ವೆಂಕಟರಾವ್ ನಾಡಗೌಡ ಅವರು ಸ್ಟಾರ್ ಪ್ರಚಾರಕರ ಲಿಸ್ಟ್ ನಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!