ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ನಲುಗಿದ ಆಫ್ರಿಕಾ

153

ಪ್ರಜಾಸ್ತ್ರ ಕ್ರೀಡಾ ಸುದ್ದಿ

ತಿರುವನಂತಪುರಂ: ಸೌಥ್ ಆಫ್ರಿಕಾ ವಿರುದ್ಧ ಮೂರು ಟಿ-20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಬುಧುವಾರ ಸಂಜೆ ನಡೆದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕ ಲೆಕ್ಕಾಚಾರವನ್ನು ಬೌಲರ್ ಗಳಾದ ಅರ್ಷದೀಪ್ ಸಿಂಗ್ ಹಾಗೂ ದೀಪಕ್ ಚಹಾರ್ ಸರಿ ಮಾಡಿದರು.

ಅರ್ಷದೀಪ್, ಸೌಥ್ ಆಫ್ರಿಕಾದ ಮಾರಕ ಬ್ಯಾಟ್ಸಮನ್ ಗಳಾದ ಡಿ ಕಾಕ್, ಡೇವಿಡ್ ಮಿಲ್ಲರ್, ರೋಸ್ವೊ ವಿಕೆಟ್ ಪಡೆದರೆ, ಚಹರ್ ಅವರು ಟಿಂಬಾ, ಟ್ರಿಸ್ಟಾನ್ ಸ್ಟುಬಾಸ್ ವಿಕೆಟ್ ಪಡೆದರು. ಟಿಂಬಾ, ರಿಲೇ, ಮಿಲ್ಲರ್, ಸ್ಟುಬ್ಸ್ ಡಕೌಟ್ ಆದರು. ಡಿಕಾಕ್ 1 ರನ್, ಮಾರ್ಕಮ್ 25, ಪರ್ನಲ್ 24 ರನ್ ಗಳಿಸಿ ಔಟ್ ಆದರು.

ಸೌಥ್ ಆಫ್ರಿಕಾಗೆ ಆಸರೆಯಾಗಿ ನಿಂತ ಕೇಶವ್ ಮಹಾರಾಜ್ 41 ರನ್ ಗಳಿಸಿದರು. ಹರ್ಷಲ್ ಪಟೇಲ್ ಮಹಾರಾಜ್ ವಿಕೆಟ್ ಪಡೆದರು. ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತು. ಅರ್ಷದೀಪ್ ಸಿಂಗ್ 3, ದೀಪಕ್ ಚಹರ್ 2, ಹರ್ಷಲ್ ಪಟೇಲ್ 2 ಹಾಗೂ ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!