ಇಂದಿರಾ ಕ್ಯಾಂಟೀನ್ ತಿಂಡಿ, ಊಟದ ಬೆಲೆ ಏರಿಕೆ?

369

ಬೆಂಗಳೂರು: ಈಗಾಗ್ಲೇ ಒಂದಲ್ಲ ಒಂದು ಬೆಲೆ ಏರಿಕೆಯ ಬಿಸಿ ಸಾರ್ವಜನಿಕರಿಗೆ ತಟ್ಟುತ್ತಿದೆ. ಬಸ್ ಪ್ರಯಾಣ ದರವನ್ನ ಶೇಕಡ 12ರಷ್ಟು ಏರಿಕೆ ಮಾಡಿರುವ ಸರ್ಕಾರದ ಯಡವಿಟ್ಟಿನಿಂದ, ಇದೀಗ ಇಂದಿರಾ ಕ್ಯಾಂಟೀನ್ ಟಿಫಿನ್ ಹಾಗೂ ಊಟದ ಬೆಲೆ ಏರಿಸಲು ಬಿಬಿಎಂಪಿ ಮುಂದಾಗಿದೆಯಂತೆ.

ಹೌದು, ಕಳೆದೊಂದು ವರ್ಷದಿಂದ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ವಂತೆ. ಹೀಗಾಗಿ ಇಂದಿರಾ ಕ್ಯಾಂಟೀನ್ ತಿಂಡಿ, ಊಟದ ಬೆಲೆ ಏರಿಕೆ ಮಾಡಲು ಮುಂದಾಗಿದೆ. 5 ರೂಪಾಯಿ ಟಿಫಿನ್ ನ್ನ 10 ರೂಪಾಯಿ ಹಾಗೂ 10 ರೂಪಾಯಿ ಊಟವನ್ನ 15 ರೂಪಾಯಿಗೆ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಮೇಲೆ ಮತ್ತಷ್ಟು ಹೊರೆ ಹೊರೆಸುವ ಚಿಂತನೆ ನಡೆದಿದೆಯಂತೆ.

ಹೊಸ ಗುತ್ತಿಗೆ ನೀಡುವುದರ ಜೊತೆಗೆ ಹೊಸ ರೇಟ್ ಸಹ ಇರಲಿದೆ ಎಂದು ಹೇಳಲಾಗ್ತಿದೆ. ಈ ಮೂಲಕ ಸರ್ಕಾರದ ಹೊರೆ ಇಳಿಸಿ ಅದನ್ನ ಸಾರ್ವಜನಿಕರ ಮೇಲೆ ಹೇರುವ ಪ್ಲಾನ್ ನಡೆದಿದೆ ಅನ್ನೋ ಮಾತುಗಳುಗಳು ಕೇಳಿ ಬರ್ತಿದ್ದು, ಇದು ಎಷ್ಟು ಸರಿ ಅನ್ನೋ ಪ್ರಶ್ನೆ ಎದ್ದಿದೆ.




Leave a Reply

Your email address will not be published. Required fields are marked *

error: Content is protected !!