ಬ್ರೇಕಿಂಗ್ ನ್ಯೂಸ್
Search

ಪುಲ್ವಾಮಾ ದಾಳಿ: ಜೆಇಎಂ ಉಗ್ರ ಅರೆಸ್ಟ್

349

ನವದೆಹಲಿ: ಪುಲ್ವಾಮಾ ದಾಳಿಗೆ ನೆರವು ನೀಡಿದ್ದ ಜೆಇಎಂ ಉಗ್ರ ಸಂಘಟನೆಯ ಭಯೋತ್ಪಾದಕನೊಬ್ಬನನ್ನು ಅರೆಸ್ಟ್ ಮಾಡಲಾಗಿದೆ. ಸಿಆರ್ ಪಿಎಫ್ ನ 40 ಯೋಧರ ಹತ್ಯೆಗೆ ನೆರವು ನೀಡಿದ್ದ ಪಾಕಿಸ್ತಾನ ಮೂಲದ ಜೈಷ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಶಕೀರ್ ಬಷೀರ್ ಮ್ಯಾಗ್ರೆ ಎಂಬಾತನನ್ನ ಬಂಧಿಸಲಾಗಿದೆ.

ಪುಲ್ವಾಮಾದ ಕಾಕಾಪೊರದ ಹಾಜಿಬಲ್ ನಿವಾಸಿಯಾಗಿರುವ ಈತ ಫರ್ನಿಚರ್ ಅಂಗಡಿಯ ಮಾಲೀಕನಾಗಿದ್ದಾನೆ. ಪುಲ್ವಾಮಾ ದಾಳಿಯ ಆತ್ಮಹುತಿ ಬಾಂಬರ್ ಅದಿಲ್ ಅಹ್ಮದ ಡಾರ್ನಿಗೆ ನೆರವು ನೀಡಿದ್ದ. ಪಾಕಿಸ್ತಾನದ ಉಗ್ರ ಉಮರ್ ಫಾರೂಖ್ ಅದಿಲ್ ನನ್ನ ಶಕೀರ್ ಗೆ ಪರಿಚಯ ಮಾಡಿಕೊಟ್ಟಿದ್ದ. ಬಳಿಕ ಈತ ಜೆಇಎಂ ಸಂಘಟನೆಯ ಕೆಲಸ ಮಾಡ್ತಿದ್ದ ಎಂದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತಿಳಿಸಿದ್ದಾರೆ.

2019 ಫೆಬ್ರವರಿಯಲ್ಲಿ ಮಾರುತಿ ಇಕೊ ಕಾರೊಂದಕ್ಕೆ ಐಟಿಡಿ ಸ್ಫೋಟಕ ಇಟ್ಟಿದ್ದು ತಾನೇ ಎಂದು ಇವನು ಒಪ್ಪಿಕೊಂಡಿದ್ದಾನೆ. ಈ ದಾಳಿಯ ಹಿಂದಿದ್ದ ಉಮರ್ ಫಾರೂಖ್ ಹಾಗೂ ಕಮ್ರಾನ್ ನನ್ನ ಕಳೆದ ವರ್ಷದ ನಡೆಸಿದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿತ್ತು.




Leave a Reply

Your email address will not be published. Required fields are marked *

error: Content is protected !!