ಹಿರಿಯ ನಟ ಲೋಹಿತಾಶ್ವ ನಿಧನ

187

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕನ್ನಡದ ಹಿರಿಯ ನಟ ಟಿ.ಎಸ್ ಲೋಹಿತಾಶ್ವ(80) ಅವರು ಮಂಗಳವಾರ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಅಕ್ಟೋಬರ್ 4ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮಂಗಳವಾರ ನಿಧನರಾಗಿದ್ದಾರೆ.

ತುಮಕೂರಿನ ತೊಂಡಗೆರೆ ಗ್ರಾಮದ ಲೋಹಿತಾಶ್ವ, ತಮ್ಮ ಕಂಚಿನ ಕಂಠದ ಮೂಲಕ ಜನಪ್ರಿಯತೆ ಪಡೆದವರು. ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಫಿಲ್ಮ್ ಫೇರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಉದಯ್ ಸನ್ ಫೆಸ್ಟ್ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ.

ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಲೋಹಿತಾಶ್ವ ಅವರು, ರಂಗಭೂಮಿ, ಸಿನಿಮಾ, ಧಾರವಾಹಿಗಳಲ್ಲಿ ತೊಡಗಿಸಿಕೊಂಡಿದ್ದರು. ವತ್ಸಲಾ ಇವರ ಪತ್ನಿಯ ಹೆಸರು. ಇವರ ಮೂವರ ಮಕ್ಕಳಲ್ಲಿ ಶರತ್ ಲೋಹಿತಾಶ್ವ ಅವರು ಸಹ ಕನ್ನಡ ಚಿತ್ರರಂಗದಲ್ಲಿ ಖಳನಟರಾಗಿ ಹೆಸರು ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!