ಹಿರಿಯ ನಟ ಶಂಕರ್ ರಾವ್ ನಿಧನ

211

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಕನ್ನಡದ ಹಿರಿಯ ನಟ ಶಂಕರ್ ರಾವ್(84) ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ.

ಪಾಪಾ ಪಾಂಡು ಧಾರವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಸ್ಮಾಲ್ ಸ್ಕ್ರೀನ್ ಜೊತೆಗೆ ನೂರಾರು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಹವ್ಯಾಸಿ ರಂಗಭೂಮಿಯ ಮೂಲಕ ನಟನಾ ಕ್ಷೇತ್ರಕ್ಕೆ ಬಂದ ಶಂಕರ್ ರಾವ್, ತಮ್ಮ ವಿಭಿನ್ನ ಶೈಲಿಯ ನಟನೆಯಿಂದ ಖ್ಯಾತಿ ಗಳಿಸಿದವರು. ಇವರ ನಿಧನಕ್ಕೆ ಸ್ಯಾಂಡಲ್ ವುಡ್ ಅಂಗಳದ ಮಂದಿ ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!