ಪರಿಸರ ಸ್ವಚ್ಛತಾ ಶ್ರಮದಾನ

406

ಧಾರವಾಡ: ನಗರದ ಕೆಲಗೇರಿ ಕೆರೆಯ ಆವರಣದ ಪುಟ್ ಪಾತ್ ನ್ನ ಕೃಷಿ ವಿಶ್ವವಿದ್ಯಾಲಯದ ಎನ್ ಸಿಸಿ ಕೆಡೆಟ್ಗಳು ಹಾಗೂ ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಭಾನುವಾರ ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸಿದರು.

ಬೆಳಗ್ಗೆ ಕೆರೆಯ ಆವರಣಕ್ಕೆ ಆಗಮಿಸಿದ ಕೆಡೆಟ್‍ಗಳು ಸಾರ್ವಜನಿಕರಿಗೆ ಸ್ವಚ್ಛತೆ ಹಾಗೂ ‌ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು. ನಂತರ ಐದು ಗಂಟೆಗಳ‌ ಕಾಲ ಶ್ರಮದಾನ ಮಾಡುವ ಮೂಲಕ ಕೆರೆ ದಂಡೆ ಹಾಗೂ ಪುಟ್ ಪಾತ್ ಸ್ವಚ್ಛಗೊಳಿಸಿದ್ರು. ಈ ವೇಳೆ ಮಾತ್ನಾಡಿದ ಮಹಾನಗರ ಪಾಲಿಕೆ ವಲಯ ‌ಅಧಿಕಾರಿ ಎಂ.ಬಿ.ಸಬರದ, ಪರಿಸರ ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿದೆ.‌ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದುವ ಮೂಲಕ ಇತರರಿಗೆ ಜಾಗೃತಿ ಮೂಡಿಸಬೇಕು ಅಂತಾ ಹೇಳಿದ್ರು.

ಕೃಷಿ ವಿವಿಯ ಎನ್ ಸಿಸಿ ಅಧಿಕಾರಿ ಯು.ಕೆ.ಶಾನವಾಡ ಮಾತನಾಡಿ, ನಮ್ಮ ನಿತ್ಯ ಜೀವನದಲ್ಲಿ ಪರಿಸರವೇ ಉಸಿರಾಗಿದೆ. ಅದನ್ನು ಕಾಪಾಡಿಕೊಂಡು ಹೋಗಬೇಕಾದ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಅಂತಾ ಹೇಳಿದ್ರು. ಪಾಲಿಕೆ ಹೆಲ್ತ್ ಇನ್ಸ್ಪೆಕ್ಟರ್ ಮದುಕೇಶ್ವರ, ಎನ್ ಸಿಸಿ ಪುರುಷ ಮತ್ತು ಮಹಿಳಾ ಕೆಡೆಟ್‍ಗಳು ಹಾಗೂ 20ಕ್ಕೂ ಹೆಚ್ಚು ಪೌರ ಕಾರ್ಮಿಕರ ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!