ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸಬೇಕು: ವಿಜಯಾದೇವಿ ಓಂಕಾರ

189

ಪ್ರಜಾಸ್ತ್ರ ಸುದ್ದಿ

ಧಾರವಾಡ: ಮಕ್ಕಳಿಗೆ ಕಾನೂನುಗಳ ಕುರಿತು ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ. ಆಗ ಮಗು ಉತ್ತಮ ಪ್ರಜೆಯಾಗಿ ರೂಪಗಿಳ್ಳಲು ಹೆಚ್ಚು ಪೂರಕವಾಗಲಿದೆ ಎಂದು ನವಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷೆ ವಿಜಯಾದೇವಿ ಓಂಕಾರ ಅಭಿಪ್ರಾಯಪಟ್ಟರು.

ನಗರದ ದಯಾಶಂಕರ ಆಶ್ರಮದ ಮಕ್ಕಳಿಗೆ ಆಯೋಜಿಸಿದ ‘ಕಾನೂನು ಅರಿವು’ ಕಾರ್ಯಕ್ರಮದಲ್ಲಿ ‌ಮಾತನಾಡಿದರು. ಶಾಲಾ ಮಕ್ಕಳಿಗೆ ವಯಸ್ಸಿನ ಅನುಗುಣವಾಗಿ ಕಾನೂನಿನ ಅರಿವು ಮತ್ತು ಜಾಗೃತಿ ಮೂಡಿಸಬೇಕಿದೆ. ಪೋಸ್ಕೊ, ಬಾಲಾಪರಾಧ, ಬಾಲ ಕಾರ್ಮಿಕ ಅಧಿನಿಯಮ ಮತ್ತು ರಸ್ತೆ  ಸುರಕ್ಷತಾ ನಿಯಮಗಳ ಕುರಿತು ತಿಳಿಸುವುದು ಅವಶ್ಯಕ ವಾಗಿದೆ ಎಂದ ಅವರು, ಇವುಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಯಾಶಂಕರ ಆಶ್ರಮದ  ಆನಂದ ಗುರೂಜಿ ಮಾತನಾಡಿ, ಮಕ್ಕಳು ಸ್ವಯಂ ಶಿಸ್ತು ಮತ್ತು ಜೀವನದಲ್ಲಿ ಉತ್ತಮ ಆದರ್ಶ ಗುರಿಗಳ ಹೊಂದಬೇಕು. ದೇಶದಲ್ಲಿ ಮಹಾನ್ ಸಾಧಕರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು‌ ಸಲಹೆ ನೀಡಿದರು.

ಕರ್ನಾಟಕ ಕಾಲೇಜಿನ ಗಣಕಯಂತ್ರ ವಿಭಾಗದ ಉಪನ್ಯಾಸಕ  ರಾಮನಗೌಡ, ನವಶಕ್ತಿ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಕಾಶಿನಾಥ, ಅರುಣ ಅಮರಗೋಳ, ಸಚಿನ ಹೀರೆಮಠ ಮತ್ತು ಆಶ್ರಮದ ಮಕ್ಕಳು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!