ಮದ್ಯದಂಗಡಿ ಓಪನ್: ಸಿದ್ದು ಯೂ ಟರ್ನ್!

490

ಬೆಂಗಳೂರು: ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದೆ ತಡ, ರಾಜ್ಯದಲ್ಲಿ ಹಬ್ಬ ಮಾಡಿದ್ದಾರೆ. ಕೆಲವು ಕಡೆ ಚಿತ್ರ ವಿಚಿತ್ರ ವರ್ತನೆ ತೋರಿದ್ದಾರೆ. ಕೆಲ ಕಡೆ ಕೊಲೆ ಅಂತಾ ಘಟನೆಗಳು ನಡೆದಿವೆ. ಅಲ್ದೇ, ಈ ಬಗ್ಗೆ ಪರ ವಿರೋಧಗಳು ಕೇಳಿ ಬಂದ್ವು. ಇದೀಗ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಅವಸರ ಹಾಗೂ ಪೂರ್ವ ಸಿದ್ಧತೆಯಿಲ್ಲದ ನಿರ್ಧಾರ. ಬಹುತೇಕ ಕಡೆಗಳಲ್ಲಿ ಸಾಮಾಜಿಕ ಅಂತರವನ್ನ ಜನ ಪಾಲಿಸದಂತೆ ಕಂಡು ಬಂದಿಲ್ಲ. ಇದರಿಂದ ಕರೋನಾ ಉಲ್ಬಣಗೊಂಡರೆ ಅದರ ಸಂಪೂರ್ಣ ಹೊಣೆಯನ್ನ ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ ಎಂದು ಟ್ವೀಟ್ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.

https://twitter.com/siddaramaiah/status/1257592381211172864?s=20

ಈ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೊದ್ಲು ಮದ್ಯದ ಅಂಗಡಿ ತೆರೆಯಲು ಅನುಮತಿ ಕೊಡಬೇಕು ಎಂದು ನೀವೆ ಹೇಳಿದ್ದೀರಿ. ಈಗ ಯೂ ಟರ್ನ್ ಹೊಡೆಯುತ್ತಿದ್ದೀರಿ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಇನ್ನು ಆರ್ಥಿಕ ಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಮೊದಲ ದಿನವೇ 45 ಕೋಟಿ ರೂಪಾಯಿ ಮೊತ್ತದ ವ್ಯಾಪಾರ ನಡೆದಿದೆ.




Leave a Reply

Your email address will not be published. Required fields are marked *

error: Content is protected !!