ಲವ್ ಯೂ ರಚ್ಚು ತಂಡದ ಜೊತೆ ಕಾಣಿಸಿಕೊಳ್ಳಲ್ಲ ಎಂದು ಅಜಯ್

420

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಅಜಯ್ ರಾವ್ ಹಾಗೂ ನಟಿ ರಚಿತಾ ರಾಮ್ ಜೋಡಿಯ ಲವ್ ಯೂ ರಚ್ಚು ರೆಡಿಯಾಗುತ್ತಿದೆ. ಇದರಲ್ಲಿ ಹಾಡೊಂದು ಇತ್ತೀಚೆಗೆ ಸಾಕಷ್ಟು ವೈರಲ್ ಆಗಿತ್ತು. ಪತ್ರಕರ್ತರು ಕೇಳಿದ ಪ್ರಶ್ನೆಗೆ ನಟಿ ರಚ್ಚು ಮರು ಪ್ರಶ್ನೆ ಮಾಡಿ ಟ್ರೋಲ್ ಆಗಿದ್ದು ಗೊತ್ತಿರುವ ವಿಚಾರ. ಈಗ ನಟ ಅಜಯ್ ರಾವ್ ಸರದಿ.

ಯೆಸ್, ನಟ ಅಜಯಗೆ ನಿರ್ಮಾಪಕರಿಂದ ಅವಮಾನವಾಗಿದೆಯಂತೆ. ಹೀಗಾಗಿ ಲವ್ ಯೂ ರಚ್ಚು ಚಿತ್ರತಂಡದ ಜೊತೆಗೆ ಕಾಣಿಸಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಟ ಅಜಯ್ ಕಾಣಿಸಿಕೊಂಡಿರಲಿಲ್ಲ. ಅಲ್ಲಿ ಅತಿಥಿಯಾಗಿ ಧ್ರುವ್ ಸರ್ಜಾ ಬಂದಿದ್ದರು. ಹೀಗಾಗಿ ನಟ ಹಾಗೂ ನಿರ್ಮಾಪಕರ ನಡುವಿನ ಮುನಿಸು ಚಿತ್ರಕ್ಕೆ ಎಷ್ಟು ಎಫೆಕ್ಟ್ ಆಗುತ್ತೆ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!