ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಆಟೋದಲ್ಲಿ ಬಂದು ಸುಧಾರಿತ ಬಾಂಬ್ ಗಳ ಬ್ಯಾಗ್ ಇಟ್ಟು ಹೋಗಿರುವ ಶಂಕಿತ ವ್ಯಕ್ತಿಯ ಫೋಟೋವನ್ನ ರಿಲೀಸ್ ಮಾಡಲಾಗಿದೆ. ಮಂಗಳೂರು ಪೊಲೀಸ್ರು ಶಂಕಿತನ ಫೋಟೋ ಬಿಡುಗಡೆ ಮಾಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಅಧಿಕೃತವಾಗಿ ಆಟೋ ಹಾಗೂ ಶಂಕಿತ ವ್ಯಕ್ತಿಯ ಫೋಟೋ ಬಿಡುಗಡೆಗೊಳಿಸಿದ್ದಾರೆ. ಶಂಕಿತ ವ್ಯಕ್ತಿ ಆಟೋದಲ್ಲಿ ಬಂದು ಬ್ಯಾಗ್ ಇಟ್ಟು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.