ಮೈಂಡ್ ಲೆಸ್ ಪದ ನನ್ನದಲ್ಲ: ನಟ ಕಿಶೋರ್

216

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಕಿಶೋರ್ ಕೆಜಿಎಫ್-2 ಚಿತ್ರದ ಬಗ್ಗೆ ಮಾತನಾಡುವಾಗ ಮೈಂಡ್ ಲೆಸ್ ಸಿನಿಮಾ ನೋಡುವುದಿಲ್ಲವೆಂದು ಹೇಳಿದ್ದಾರೆ ಎಂದು ಸಿಕ್ಕಾಪಟ್ಟೆ ಸದ್ದು ಮಾಡಿತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮೈಂಡ್ ಲೆಸ್ ಪದ ನನ್ನದಲ್ಲ. ನೋಡಿಲ್ಲ ಎಂದಿರುವುದನ್ನು ನೋಡುವುದಿಲ್ಲವೆಂದು ಅವರಿಗೆ ಇಷ್ಟ ಬಂದಂತೆ ಬರೆದಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಪ್ರೇಕ್ಷಕನಾಗಿ ಎಲ್ಲರಿಗೂ ಇರುವ ಅಭಿರುಚಿ, ಸ್ವಾತಂತ್ರ್ಯ ನನ್ನದು. ಯಾರನ್ನೂ ಥಿಯೇಟರ್ ಒಳಗೆ, ಹೊರಗೆ ತಳ್ಳಲಾಗದು. ನನ್ನ ಸಿನಿಮಾವಾದರೂ ಸರಿ ಅಥವ ಬೇರೆ ಸಿನಿಮಾವಾದರೂ ಸರಿ. ನನ್ನ ಅಭಿರುಚಿಯೋ ಅಲ್ಲವೋ ಕೆಜಿಎಫ್ ಸಿನಿಮಾದ ಯಶಸ್ಸಿನ ಬಗ್ಗೆ ಸಂತೋಷವಿದೆ. ನಾನು ರೈತರ ಬಗ್ಗೆ ಮಾತನಾಡಿದಾಗ ಇಷ್ಟೊಂದು ಚರ್ಚೆಯಾಗಿದ್ದರೆ ತೃಪ್ತಿ ಇರುತ್ತಿತ್ತು ಅಂತಾ ಹೇಳಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಕಾಂತಾರ ಚಿತ್ರ ನೋಡಿರದ ಬಗ್ಗೆ ಬಂದ ಚರ್ಚೆಯ ವೇಳೆ ಕೆಜಿಎಫ್ ವಿಚಾರ ಬಂತು. ಆಯ್ಕೆಯ ಸ್ವಾತಂತ್ರ್ಯದ ಬಗ್ಗೆ ಮಾತನಾಡುವಾಗ ಹೇಗೂ ಸುಳಿದ ಮಾತಿನಲ್ಲಿ ಯಾರನ್ನೋ ನೋಯಿಸುವ ಉದ್ದೇಶ ಇರಲಿಲ್ಲ. ಮೈಂಡ್ ಲೆಸ್ ಪದ ನನ್ನದಲ್ಲ. ಕೆಜಿಎಫ್ ಸಿನಿಮಾ ನೋಡುವುದಿಲ್ಲ ಎಂದು ಸಹ ಹೇಳಿಲ್ಲ. ಬರೆದವರು ಭಾಷಾಂತರ ವಿಚಾರದಲ್ಲಿ ಏನಾಯಿತೋ ಅವರವರ ಇಷ್ಟದಂತೆ ಬರೆದಿದ್ದಾರೆ ಎಂದು ಸ್ಪಷ್ಟನೆ ನೀಡಿದರು.




Leave a Reply

Your email address will not be published. Required fields are marked *

error: Content is protected !!