ಮುಂಬೈ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಹೀಗಾಗಿ ನೀತಿಸಂಹಿತೆ ಜಾರಿಯಲ್ಲಿದೆ. ಆದ್ರಿಂದ ಚುನಾವಣಾ ಆಯೋಗ ನಾಕಾಬಂದಿಯಲ್ಲಿ ಫ್ಲೈಯಿಂಗ್ ಸ್ವ್ಕಾಡ್ ಮಾಡಿದೆ. ಈ ಸ್ವ್ಕಾಡ್ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮಾಡೆಲ್ ಅರೆಸ್ಟ್ ಆಗಿದ್ದಾಳೆ.
ಕೆನಡಾ ಮೂಲದ ಮಾಡೆಲ್ ಶೀನಾ ಲಖನಿ ಮುಂಬೈ ಪೊಲೀಸರ ಅತಿಥಿಯಾಗಿದ್ದಾಳೆ. ಮುಂಬೈ ಸಬರ್ಬನ್ ವೀರಾ ದೇಸಾಯಿ ರಸ್ತೆಯಲ್ಲಿ ಹಾಕಿರುವ ನಾಕಾ ಬಂದಿಯಲ್ಲಿದ್ದ ಪೊಲೀಸ್ ಅಧಿಕಾರಿಗಳು ಶೀನಾಳನ್ನ ತಡೆದಿದ್ದಾರೆ. ಈ ವೇಳೆ ನಾನು ಅನಿವಾಸಿ ಭಾರತೀಯಳು. ಎಲೆಕ್ಷನ್ ನಲ್ಲಿ ನನ್ನದು ಏನು ಪಾತ್ರವಿಲ್ಲವೆಂದು ವಾದ ಮಾಡಿದ್ದಾಳೆ. ಬಳಿಕ ದಾಖಲೆ ಪಡೆದು ಅಲ್ಲಿಂದ ಹೋಗಿದ್ದಾಳೆ.
ಆದ್ರೆ, ಹೀಗೆ ಹೋದ ಮಾಡೆಲ್ ಬಳಿಕ ಸ್ನೇಹಿತರ ಜೊತೆ ಬಂದು ಗಲಾಟೆ ಮಾಡಿದ್ದಾಳೆ. ಸ್ವ್ಕಾಡ್ ವಿಡಿಯೋಗ್ರಾಫರ್ ನನ್ನ ಹಿಡಿದು ಎಳೆದಾಡಲಾಗಿದೆ. ಇದ್ರಿಂದಾಗಿ ಮಾಡೆಲ್ ಶೀನಾ ಲಖನಿ ಮೇಲೆ ಐಪಿಸಿ ದಂಡ ಸಂಹಿತೆ ಸೆಕ್ಷನ್ 353, 186, 509 ಹಾಗೂ 427 ದಾಖಲಿಸಲಾಗಿದೆ.