ಹಾರ್ನ್ ಹಾವಳಿಗೆ ಮುಂಬೈ ಪೊಲೀಸರ ನ್ಯೂ ಐಡಿಯಾ

358

ಮುಂಬೈ: ಮಹಾನಗರಗಳಿಂದ ಹಿಡಿದು ಪಟ್ಟಣದವರೆಗೂ ಟ್ರಾಫಿಕ್ ಸಮಸ್ಯೆ ಜೋರಾಗ್ತಿದೆ. ಹೀಗಾಗಿ ಟ್ರಾಫಿಕ್ ಸಿಗ್ನಲ್ ಬಿದ್ದಿದ್ರೂ ಕೆಲವರು ಸುಖಾಸುಮ್ಮನೆ ಹಾರ್ನ್ ಮಾಡ್ತಾರೆ. ಇದ್ರಿಂದ ಪ್ರತಿಯೊಬ್ಬರಿಗೂ ಕಿರಿಕಿರಿ. ಇದನ್ನ ತಪ್ಪಿಸಲು ಮುಂಬೈ ಪೊಲೀಸ್ರು ಹೊಸ ಐಡಿಯಾ ಮಾಡಿದ್ದಾರೆ.

ಸಂಚಾರ ಹೆಚ್ಚು ಇರುವ ಕಡೆಗಳಲ್ಲಿ ಹಾರ್ನ್ ಮಾಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ರೆಡ್ ಸಿಗ್ನಲ್ ಇದ್ದಾಗ ಹಾರ್ನ್ ಮಾಡಿದ್ರೆ ಇನ್ಮುಂದೆ ಮತ್ತಷ್ಟು ಕಾಯಬೇಕಾಗುತ್ತೆ. ಸಿಗ್ನಲ್ ಗಳಲ್ಲಿ ಡಿಸಿಬಲ್ ಮೀಟರ್ ಅಳವಡಿಸಿದ್ದು, ಹಾರ್ನ್ ಶಬ್ಧ 85 ಡಿಸಿಬಲ್ ಗಿಂತ ಹೆಚ್ಚಾಯ್ತು ಅಂದ್ರೆ, ಮತ್ತೆ ಒಂದೂವರೆ ನಿಮಿಷ ನಿಲ್ಲಬೇಕಾಗುತ್ತೆ. ಹಾಂಕ್ ಮೋರ್ ವೇಯ್ಟ್ ಮೋರ್ ಅನ್ನೋ ಬೋರ್ಡ್ ಹಾಕಿ ಹಾರ್ನ್ ಸವಾರರಿಗೆ ಮೂಗುದಾರ ಹಾಕಿದ್ದಾರೆ.

ಡಿಸಿಬಲ್ ಮೀಟರ್ ಕುರಿತಾಗಿ ಮುಂಬೈ ಪೊಲೀಸ್ರು ವಿಡಿಯೋವೊಂದು ಮಾಡಿದ್ದು, ಇದನ್ನ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ರೆಡ್ ಸಿಗ್ನಲ್ ಬಿದ್ದಾಗ್ಲೂ ಹಾರ್ನ್ ಮಾಡಿ ಕಿರಿಕಿರಿ ಮಾಡುವವರು ಸೈಲೆಂಟ್ ಆಗಿದ್ದಾರೆ. ಈ ರೀತಿ ಎಲ್ಲ ನಗರಗಳಲ್ಲಿ ಅಳವಡಿಸುವುದು ಬೆಸ್ಟ್.




Leave a Reply

Your email address will not be published. Required fields are marked *

error: Content is protected !!