ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಮೇ 30ರಂದು ಪ್ರಮಾಣ ವಚನ ಸ್ವೀಕರಿಸಲು ಎಲ್ಲ ರೀತಿಯ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇದು ಮುಗಿಯುತ್ತಿದ್ದಂತೆಯೇ ಮೋದಿ, ನೆರೆಯ ದೇಶಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡ್ತಿದ್ದಾರೆ.
ಮೊದಲ ಐದು ವರ್ಷದ ಆಡಳಿತದಲ್ಲಿ ಒಮ್ಮೆಯೂ ಭೇಟಿ ನೀಡದ ಮಾಲ್ಡೀವ್ಸ್ ಗೆ ನರೇಂದ್ರ ಮೋದಿ ಜೂನ್ ನಲ್ಲಿ ಭೇಟಿ ನೀಡಲಿದ್ದಾರೆ ಅಂತಾ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಮೋದಿ ಇದುವರೆಗೂ ಭೇಟಿ ನೀಡದ ನೆರೆಯ ದೇಶವಿದು.
ದೇಶದ ಭದ್ರತೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಮುದ್ರ ನಿಯಮಗಳ ಕುರಿತಾದ ಮಾತುಕತೆಯ ಭೇಟಿ ಇದಾಗಿದೆ ಅಂತಾ ಹೇಳಲಾಗ್ತಿದೆ.