ಹೊಸ ವರ್ಷದಂದು ವಿಶ್ವದಲ್ಲಿಯೇ ಅತೀ ಹೆಚ್ಚು ಮಕ್ಕಳು ಜನಿಸಿದ್ದು ಭಾರತದಲ್ಲಿ…

384

ನವದೆಹಲಿ: ಹೊಸ ವರ್ಷದ ಮೊದಲ ದಿನ ದೇಶದಲ್ಲಿ ಜನಿಸಿರುವ ಮಕ್ಕಳ ಸಂಖ್ಯೆ ಕೇಳಿದ್ರೆ ಖಂಡಿತ ಶಾಕ್ ಆಗ್ತೀರಿ. ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಮಕ್ಕಳು ಭಾರತದಲ್ಲಿ ಜನಿಸಿವೆ. ಜನವರಿ 1, 2020ರಂದು ಬರೋಬ್ಬರಿ 67 ಸಾವಿರದ 385 ಶಿಶುಗಳು ಜನಿಸಿವೆ. ಇದು ವಿಶ್ವದಲ್ಲಿಯೇ ಅತೀ ಹೆಚ್ಚಾಗಿದೆ.

ಚೀನಾದಲ್ಲಿ 46 ಸಾವಿರದ 299, ನೈಜೀರಿಯಾ 26 ಸಾವಿರದ 639, ಪಾಕಿಸ್ತಾನ 16 ಸಾವಿರದ 787, ಇಂಡೋನಿಷಿಯಾ 13 ಸಾವಿರದ 20 ಹಾಗೂ ಅಮೆರಿಕ 10 ಸಾವಿರದ 540 ಮಕ್ಕಳು ಜನಿಸಿವೆ ಎಂದು ಯೂನಿಸೆಫ್ ತಿಳಿಸಿದೆ. ಫಸಿಫಿಕ್ ದ್ವೀಪರಾಷ್ಟ್ರದ ಫಿಜಿಯಲ್ಲಿ ಮೊದಲ ಮಗು ಜನಿಸಿದೆ.

ಇಲ್ಲಿ ಮತ್ತೊಂದು ಮುಖ್ಯವಾದ ಸಂಗತಿ ಅಂದರೆ ಬಹುತೇಕ ತಾಯಿಯಂದಿರು ಜನವರಿ 1ರಂದು ಮಕ್ಕಳು ಜನಿಸಬೇಕು ಅನ್ನೋ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಅನ್ನೋದು ತಿಳಿದು ಬಂದಿದೆ. ಹೊಸ ವರ್ಷ ಹಾಗೂ ಮಕ್ಕಳ ಹುಟ್ಟು ಹಬ್ಬವನ್ನ ಒಂದೇ ದಿನ ಆಚರಿಸಬಹುದು ಅನ್ನೋ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಅಂತಾ ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!