ಬ್ಯೂಟಿ ಬೇಟಿಯಾಡಲು ಹೋದ ಪೊಲೀಸರಿಗೆ ಸಿಕ್ಕಿದ್ಯಾರು?

403

ರಾಯಪುರ: ಆ ಬ್ಯೂಟಿ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಭರ್ಜರಿ ನವರಂಗಿ ಆಟವಾಡ್ತಿದ್ಳು. ಆಗಾಗ ಸಮಾಜದಲ್ಲಿ ಶಾಂತಿ ಕದಡುವ ಪೋಸ್ಟ್ ಮಾಡ್ತಿದ್ದಳು. ಇದನ್ನ ನೋಡಿ ನೋಡಿ ಸಾಕಾಗಿ ಹೋದ ಪೊಲೀಸ್ರು ಸುಂದರಿ ನಿಶಾ ಜಿಂದಾಲ್ ಹಿಡಿಯಲು ಹೋಗಿದ್ದಾರೆ.

ಅದಾಗ್ಲೇ ತನ್ನ ಚೆಂದದ ಫೋಟೋವನ್ನ ಡಿಪಿಗೆ ಹಾಕಿದ್ದ ನಿಶಾ, 10 ಸಾವಿರದಷ್ಟು ಫಾಲೋವರ್ಸ್ ಹೊಂದಿದ್ಳು. ಆದ್ರೆ, ಇವಳು ಮಾಡ್ತಿದ್ದ ಪೋಸ್ಟ್ ಮಾತ್ರ ಸಮಾಜದಲ್ಲಿ ಶಾಂತಿ ಕದಡುವ, ಕೋಮ ಸೌಹಾರ್ದತೆ ಹಾಳು ಮಾಡುವಂತೆ ಇದ್ವು. ಹೀಗಾಗಿ ಇದರ ಜಾಲ ಹಿಡಿದು ಹೋದ ಪೊಲೀಸರಿಗೆ ಶಾಕ್ ಕಾದಿತ್ತು. ಯಾಕಂದ್ರೆ, ಅಲ್ಲಿ ಇರೋದು ನಿಶಾ ಆಗಿರ್ಲಿಲ್ಲ.

ಫೇಸ್ ಬುಕ್ ಬ್ಯೂಟಿ ಅವಳಲ್ಲ ಅವನು

ಫೇಸ್ ಬುಕ್ ನಲ್ಲಿರುವ ಹುಡ್ಗಿಯನ್ನ ಬಂಧಿಸಲು ಹೋದ ಪೊಲೀಸರಿಗೆ ಶಾಕ್. ಯಾಕಂದ್ರೆ, ಅಲ್ಲಿ ಸಿಕ್ಕಿದ್ದು ರವಿ ಪೂಜಾರಿ ಅನ್ನೋ ಯುವಕ. ಕಳೆದ 11 ವರ್ಷಗಳಿಂದ ಇಂಜಿನಿಯರಿಂಗ್ ಪಾಸ್ ಮಾಡಿಕೊಳ್ಳಲು ಆಗದ ರವಿ ಪೂಜಾರಿ, ನಿಶಾ ಜಿಂದಾಲ್ ಅನ್ನೋ ಹೆಸರಿನಲ್ಲಿ ನಕಲಿ ಅಕೌಂಟ್ ಓಪನ್ ಮಾಡಿ ಕಳೆದ 8 ವರ್ಷಗಳಿಂದ ಅದನ್ನ ನಿರ್ವಹಣೆ ಮಾಡ್ತಿದ್ದನಂತೆ. ಇದೀಗ ಉತ್ತರ ಪ್ರದೇಶದ ರಾಯಪುರ ಜಿಲ್ಲೆಯ ಪೊಲೀಸರು ಆತನನ್ನ ಬಂಧಿಸಿ, ಐಪಿಸಿ ಸೆಕ್ಷನ್ 153(ಸಹೌರ್ದ ಕದಡುವುದು), 295(ಧರ್ಮ ನಿಂದನೆ) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ಇದನ್ನ ಐಪಿಎಸ್ ಅಧಿಕಾರಿ ಪ್ರಿಯಾಂಕ ಶುಕ್ಲಾ, ಅರುಣ ಬಾಥ್ರೂ ಟ್ವೀಟರ್ ಮೂಲಕ ವಿಚಾರ ಹಂಚಿಕೊಂಡಿದ್ದಾರೆ. ಡಿಪಿ ಫೋಟೋ ನೋಡಿ ಸಾವಿರಾರು ಜನ ಫಾಲೋ ಮಾಡಿರಬೇಕು ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!