ಮನಸ್ಸಿನ ಮಾತು ಕಂಪ್ಯೂಟರ್ ಸ್ಕ್ರೀನ್ ಮೇಲೆ ಮೂಡಲಿದೆ..!

437

ತಂತ್ರಜ್ಞಾನ ಬೆಳದಂತೆ ಇಂದು ಹೊಸ ಹೊಸ ಆವಿಸ್ಕಾರಗಳು ಆಗ್ತಿವೆ. ಇವತ್ತಿನ ಸಂಶೋಧನೆ ನಾಳೆಗೆ ಹಳೆಯದಾಗುವ ಮಟ್ಟದಲ್ಲಿ ಟೆಕ್ನಾಲಜಿ ಸ್ಪೀಡ್ ಇದೆ. ಅದರ ಮುಂದುವರೆದ ಭಾಗವಾಗಿ ಇಲ್ಲೊಂದು ವಿಶೇಷ ಸ್ಟೋರಿ ಇದೆ ನೋಡಿ. ನೀವು ಮನಸ್ಸಿನಲ್ಲಿ ಏನು ಅಂದುಕೊಳ್ತಿರೋ ಅದನ್ನ ಗುರುತಿಸುವ ಮತ್ತು ಹೇಳುವ ಬಗ್ಗೆ ಅನೇಕ ಸಿನಿಮಾಗಳಲ್ಲಿ ನೋಡಿದ್ದೀರಿ. ಅರೇ ಇದೇನು ನಾನು ಅಂದುಕೊಂಡಿದ್ದನ್ನ ಅದ್ಹೇಗೆ ಇಷ್ಟು ಕರೆಕ್ಟ್ ಆಗಿ ಹೇಳ್ತಾರೆ ಅನ್ನೋ ಮಾತುಗಳು ಸಹ ಕೇಳಿ ಬರ್ತವೆ.

ಇನ್ಮುಂದೆ ಇದು ಬರಿ ಮನುಷ್ಯರಿಂದ ಮಾತ್ರವಲ್ಲ, ನಿಮ್ಮ ಫೇಸ್ ಬುಕ್ ಸಹ ಈ ಕೆಲಸ ಮಾಡುತ್ತೆ. ಯೆಸ್, ಮೆದುಳು ಮತ್ತು ಕಂಪ್ಯೂಟರ್ ಗೆ ಸಂಪರ್ಕ ಕಲ್ಪಿಸುವ ಆಗ್ಮೆಂಟೆಡ್ ರಿಯಾಲಿಟಿ ಇಂಟರ್ ಫೇಸ್ ಸಾಧನವನ್ನ ಫೇಸ್ ಬುಕ್ ಅಭಿವೃದ್ಧಿ ಪಡಿಸ್ತಿದೆ. ಈ ಮೂಲಕ ನೀವು ಮನಸ್ಸಿನಲ್ಲಿ ಮಾತ್ನಾಡಿರುವುದನ್ನ ಫಾಟಾಫಟ್ ಟೈಪ್ ಮಾಡುತ್ತೆ. 2017ರಲ್ಲಿ ನಡೆದ ಎಫ್ 8 ಡೆವಲಪರ್ಸ್ ಸಮ್ಮೇಳನದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿತ್ತು. ಮನಸ್ಸಿನಲ್ಲಿ ಮಾತ್ನಾಡುವುದನ್ನ ನೇರವಾಗಿ ಟೈಪ್ ಮಾಡುವ ಮತ್ತು ಅಪಾಯಕಾರಿಯಲ್ಲದ ವಿಷಯಗಳನ್ನ ಹೇಳುವ ಉಪಕರಣ ನಿರ್ಮಿಸುವುದಾಗಿ ಅಂದೆ ಹೇಳಿತ್ತು.

ಕ್ಯಾಲಿಪೊರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಫೇಸ್ ಬುಕ್ ಜೊತೆ ಕೈಜೋಡಿಸಿದ್ದಾರೆ. ನರ ದೌರ್ಬಲ್ಯದಿಂದ ಬಳಲುತ್ತಿರುವ ರೋಗಿಗಳ ಮೆದುಳಿನ ಚಟುವಟಿಕೆಗಳಿಂದ ಅವರು ಹೇಳುವ ಮಾತುಗಳನ್ನ ಪತ್ತೆ ಹಚ್ಚುವ ಸಲುವಾಗಿ ಸಂಶೋಧಕರು ಈ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಫೇಸ್ ಬುಕ್ ತನ್ನ ಬ್ಲಾಗ್ ವೊಂದರಲ್ಲಿ ತಿಳಿಸಿದೆ.

ಪೂರ್ತಿ ಅತಿಕ್ರಮಣ ಮೆದುಳು ಕಂಪ್ಯೂಟರ್ ಇಂಟರ್ ಫೇಸ್ ನ್ನ ಎಆರ್ ಗ್ಲಾಸ್ ಗಳಿಗೆ ಇನ್ ಪುಟ್ ಒದಗಿಸಲು ನಾವು ಇನ್ನು ಎಷ್ಟು ದೂರ ಚಲಿಸಬೇಕಾಗಿದೆ ಅಂತಾ, ನೇಚರ್ ಕಮ್ಯೂನಿಕೇಷನ್ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಬಂಧವೊಂದರಲ್ಲಿ ಯುಸಿಎಸ್ಎಫ್ ಟೀಂ ಹೇಳಿರುವುದನ್ನ ಫೇಸ್ ಬುಕ್ ತನ್ನ ಬ್ಲಾಗ್ ನಲ್ಲಿ ತಿಳಿಸಿತ್ತು. ಹೀಗಾಗಿ ಆದಷ್ಟು ಬಗ್ಗೆ ಈ ಸಾಧನ ಬರುವ ಮೂಲಕ ಮನಸ್ಸಿನ ಮಾತು ಕಂಪ್ಯೂಟರ್ ಪರದೆ ಮೇಲೆ ಮೂಡಲಿದೆ ಎನ್ನಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!