ಹೆಸರು ಬದಲಾಯಿಸಿಕೊಂಡ ಫೇಸ್ ಬುಕ್

227

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಜಗತ್ತಿನ ತುಂಬಾ ಅಸಂಖ್ಯಾತ ಜನರು ಬಳಸುವ ಫೇಸ್ ಬುಕ್ ಸಂಸ್ಥೆ ತನ್ನು ಹೆಸರು ಬದಲಿಸಿಕೊಂಡಿದೆ. ಇನ್ಮುಂದೆ ಅದು ಮೆಟಾ ಆಗಿ ಗುರುತಿಸಿಕೊಳ್ಳಲಿದೆ. ಈ ಬಗ್ಗೆ ಸಿಇಒ ಮಾರ್ಕ್ ಜುಕರ್ ಬರ್ಗ್ ಸ್ಪಷ್ಟಪಡಿಸಿದ್ದು, ಈಗಾಗ್ಲೇ ಫೇಸ್ ಬುಕ್ ಓಪನ್ ಮಾಡಿದ ತಕ್ಷಣ ಮೆಟಾ ಲೋಗೋ ಸಮೇತ ಮಾಹಿತಿ ಕಾಣಿಸಿಕೊಳ್ಳುತ್ತಿದೆ.

ಫೇಸ್ ಬುಕ್ ಅಡಿಯಲ್ಲಿ ಇಷ್ಟು ದಿನ ಕಾರ್ಯನಿರ್ವಹಿಸಿದ ವಾಟ್ಸಪ್, ಇನ್ ಸ್ಟಾಗ್ರಾಮ್, ಫೇಸ್ ಬುಕ್ ಇನ್ಮುಂದೆ ಮೆಟಾ ಅಡಿಯಲ್ಲಿ ಕೆಲಸ ಮಾಡಲಿವೆ. ಫೇಸ್ ಬುಕ್ ಸುರಕ್ಷತೆಗಿಂತ ಲಾಭದ ದೃಷ್ಟಿ ಹೆಚ್ಚಿನದ್ದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಮೆಟಾದಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದು, ಜನರನ್ನು ಇನ್ನಷ್ಟು ಹತ್ತಿರವಾಗಿಸುವ ಕೆಲಸವಾಗಿದೆಯಂತೆ.

ಹೊಸ ಆವಿಷ್ಕಾರದೊಂದಿಗೆ ಮುಂದೆ ಬಂದಿರುವ ಕಂಪನಿ ಮೆಟಾ ಹೆಸರಿನಲ್ಲಿ ಕೆಲಸ ಮಾಡಲಿದೆ. ಇದು ಹೊಸ ದೃಷ್ಟಿಕೋನದೊಂದಿಗೆ ಕೆಲಸ ಮಾಡಲಿದೆಯಂತೆ.




Leave a Reply

Your email address will not be published. Required fields are marked *

error: Content is protected !!