ಪತ್ನಿ ಜೊತೆ ಜಗಳ.. ಎಫ್ಬಿನಲ್ಲಿ ಸರಸದ ವಿಡಿಯೋ ಅಪ್ಲೋಡ್

567

ಭುವನೇಶ್ವರ್: ಪತ್ನಿ ಜೊತೆಗೆ ಕಳೆದ ಖಾಸಗಿ ಸಮಯವನ್ನ ಫೇಸ್ ಬುಕ್ ಗೆ ಅಪ್ಲೋಡ್ ಮಾಡಿದ ಘಟನೆ ಭುವನೇಶ್ವರದಲ್ಲಿ ನಡೆದಿದೆ.

ಒಡಿಶಾದ ಖಂಡಗಿರಿ ಪ್ರದೇಶದ 25 ವರ್ಷದ ಉದಿತನಾರಾಯಣ ಎಂಬಾತ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಇಂಥಾ ನೀಚ ಕೆಲಸ ಮಾಡಿದ್ದಾನೆ. ಪತಿ-ಪತ್ನಿ ಜಗಳ ಮಾಡಿಕೊಂಡಿದ್ದ ಕಾರಣಕ್ಕೆ ಕೆಲ ತಿಂಗಳುಗಳಿಂದ ಬೇರೆ ಬೇರೆಯಾಗಿದ್ದಾರೆ. ಇದೀಗ ಪತ್ನಿ ಜೊತೆ ಕಳೆದ ಸಮಯವನ್ನ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ.

ಈ ಘಟನೆ ಸಂಬಂಧ ಪತ್ನಿ ಪತಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ದೂರಿನನ್ವಯ ಉದಿತನಾರಾಯಣ ಅನ್ನೋ ಆಸಾಮಿಯನ್ನ ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!