ಅ.19ಕ್ಕೆ ‘ನಿರಾಳ’ ಅಭಿನಂದನ ಗ್ರಂಥ ಬಿಡುಗಡೆ

771

ಸಿಂದಗಿ: ಖ್ಯಾತ ಜಾನಪದ ವಿದ್ವಾಂಸ ಡಾ.ಎಂ.ಎಂ ಪಡಶೆಟ್ಟಿ ಅವರ ಅಭಿಮಾನಿಗಳು ಹಾಗೂ ವಿದ್ಯಾರ್ಥಿ ಬಳಗದ ವತಿಯಿಂದ ಅಕ್ಟೋಬರ್ 19ರಂದು ಅಭಿನಂದನ ಸಮಾರಂಭ ಆಯೋಜನೆ ಮಾಡಲಾಗಿದೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಾ.ಎಂ.ಎಂ ಪಡಶೆಟ್ಟಿ ಅಭಿನಂದನ ಸಮಿತಿಯ ಪದಾಧಿಕಾರಿಗಳು, ಜಾನಪದ ಪರಂಪರೆಗೆ ಅವರು ಸಲ್ಲಿಸಿದ ಕೊಡುಗೆ ಬಗ್ಗೆ ಮಾತ್ನಾಡಿದ್ರು. ಸಾರ್ಥಕ 70 ವರ್ಷಗಳ ಬದುಕಿಗೆ ಕಾಲಿಡ್ತಿರುವ ಗುರುಗಳಿಗೆ ಅಭಿನಂದನೆ ಸಲ್ಲಿಸಲಾಗ್ತಿದೆ. ಈ ಶುಭ ಸಮಾರಂಭದಲ್ಲಿ ‘ನಿರಾಳ’ ಅನ್ನೋ ಅಭಿನಂದನ ಗ್ರಂಥವನ್ನ ಬಿಡುಗಡೆ ಮಾಡಲಾಗ್ತಿದೆ ಎಂದು ನೆಲೆ ಪ್ರಕಾಶನದ ಕಾರ್ಯದರ್ಶಿಯಾಗಿರುವ ಸಾಹಿತಿ ಡಾ.ಚನ್ನಪ್ಪ ಕಟ್ಟಿ ತಿಳಿಸಿದ್ರು.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ

ನಿರಾಳ ಅಭಿನಂದನ ಗ್ರಂಥದಲ್ಲಿ ಡಾ.ಎಂ.ಎಂ ಪಡಶೆಟ್ಟಿ ಅವರ ಸಂಶೋಧನಾ ಒಡನಾಡಿಗಳು, ಸ್ನೇಹಿತರು, ವಿದ್ಯಾರ್ಥಿಗಳು ಬರೆದ ಲೇಖನಗಳು, ಅವನತಿಯ ಅಂಚಿನಲ್ಲಿರುವ ಜಾನಪದ ಪರಂಪರೆಯ ಸಮುದಾಯಗಳ 35 ಸಂಶೋಧನಾ ಲೇಖನಗಳು, ಪಡಶೆಟ್ಟಿ ಅವರ ಬದುಕಿನ ಚಿತ್ರಾವಳಿಗಳ ಸಂಗ್ರಹ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಪುಟಗಳ ಗ್ರಂಥವನ್ನ ಅಂದು ಬಿಡುಗಡೆ ಮಾಡಲಾಗ್ತಿದೆ ಅಂತಾ ಹೇಳಿದ್ರು.

ಈ ವೇಳೆ ಅಭಿನಂದನ ಸಮಿತಿ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪೂರ, ಸಮಿತಿ ಸದಸ್ಯರಾದ ನೆಹರು ಪೋರವಾಲ, ಅಶೋಕ ವಾರದ, ಗಂಗಾಧರ ಜೋಗೂರು, ಸಿದ್ರಾಮಪ್ಪಗೌಡ ದೇವರಮನಿ, ಎಂ.ಎಸ್ ಹೈಯ್ಯಾಳಕರ,  ಎನ್.ಎಂ ಬಿರಾದಾರ, ಮನು ಪತ್ತಾರ, ಎ.ಆರ್ ಹೆಗ್ಗನದೊಡ್ಡಿ, ಶರಣಪ್ಪ ವಾರದ, ಗುರುನಾಥ ಅರಳಗುಂಡಗಿ, ದೇವು ಮಾಕೊಂಡ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!