200 ವಧುಗಾಗಿ 10 ಸಾವಿರಕ್ಕೂ ಹೆಚ್ಚು ವರರ ಅರ್ಜಿ!

171

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಸಾಕಷ್ಟು ಸಮಸ್ಯೆಯಾಗುತ್ತಿದೆ. ಜಾತಿ, ಓದು, ಉದ್ಯೋಗ ಸೇರಿದಂತೆ ಹಲವು ಕಾರಣಗಳಿಗೆ ವಧು-ವರರ ಸಮಸ್ಯೆ ಹೆಚ್ಚಾಗುತ್ತಿದೆ. ಭಾನುವಾರ ರಾಜ್ಯ ಮಟ್ಟದ ಒಕ್ಕಲಿಗ ವಧು-ವರರ ಸಮಾವೇಶ ನಡೆಸಿದ್ದು, ಜಾತ್ರೆ ರೀತಿಯಲ್ಲಿ ನಡೆದಿದ್ದು ವೈರಲ್ ಆಗಿದೆ.

ಹೌದು, ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಸಮಾಜ ಸಂಪರ್ಕ ವೇದಿಕೆ, ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟದ ವತಿಯಿಂದ ವಧು-ವರರ ಸಮಾವೇಶ ನಡೆದಿದೆ. 200 ಒಕ್ಕಲಿಗ ಹುಡುಗಿಯರಿಗೆ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆಯಂತೆ. ಇದರಿಂದಾಗಿ ಆಯೋಜಿಕರೆ ಸುಸ್ತಾಗಿ ಹೋಗಿದ್ದಾರೆ. ವರರು ವೇದಿಕೆಯ ಮೇಲೆ ನಿಂತು ತಮ್ಮ ಸ್ವವಿವರನ್ನು ಹೇಳಿದ್ದಾರೆ. ಈ ವೇಳೆ ನೂಕುನುಗ್ಗಲು ಆಗಿ ಹಲವರಿಗೆ ಗಾಯಗಳಾಗಿವೆ.

ವರರು ತಮ್ಮ ಪೋಷಕರು, ಸಂಬಂಧಿಕರ ಜೊತೆ ಬಂದ ಪರಿಣಾಮ ಸರಿಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಸೇರಿಸಿದ್ದರು. ಈ ರೀತಿಯ ಸಮಸ್ಯೆ ಎಲ್ಲ ವರ್ಗದಲ್ಲಿ ಇದ್ದು ಹೀಗಾಗಿ ಮದುವೆಯ ವಯೋಮಿತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ.




Leave a Reply

Your email address will not be published. Required fields are marked *

error: Content is protected !!