ಮಂಡ್ಯ ಜನರ ಆಕ್ರೋಶಕ್ಕೆ ಮಣಿದ ಬಿಜೆಪಿ

234

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಇಂದು ಪ್ರಧಾನಿ ಮೋದಿ ಸಕ್ಕರೆನಾಡಿಗೆ ಭೇಟಿ ನೀಡುತ್ತಿದ್ದು, ದಶಪಥ ರಸ್ತೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಹೀಗಾಗಿ ನಗರದ ತುಂಬಾ ಬಿಜೆಪಿ ಹಾಗೂ ಕೇಸರಿ ಬಾವುಟಗಳು ಹಾರಾಡುತ್ತಿವೆ. ಇದರ ನಡುವೆ ಕಾರ್ಖಾನೆ ವೃತ್ತದಲ್ಲಿ ಉರಿಗೌಡ, ನಂಜೇಗೌಡ ಮಹಾದ್ವಾರ ಎಂದು ಫ್ಲೆಕ್ಸ್ ಹಾಕಲಾಗಿತ್ತು. ಇದಕ್ಕೆ ಎಲ್ಲಡೆಯಿಂದ ವ್ಯಾಪಕ ಟೀಕೆ ವ್ಯಕ್ತವಾಯಿತು. ಜಿಲ್ಲೆಯ ಜನರ ಪ್ರತಿಭಟನೆಯ ಎಚ್ಚರಿಕೆ ನೀಡಿದರು.

ನಿನ್ನೆ ಅಳವಡಿಸಿದ ಬೋರ್ಡ್ ಗೆ ಸಾರ್ವಜನಿಕರಿಂದ ವಿರೋಧ

ಜಿಲ್ಲೆಯ ಜನರ ಆಕ್ರೋಶಕ್ಕೆ ಮಣಿದ ಬಿಜೆಪಿ ರಾತ್ರೋರಾತ್ರಿ ಫ್ಲೆಕ್ಸ್ ಬದಲಾಯಿಸಿದೆ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ ಎಂದು ಹೊಸದಾಗಿ ಬೋರ್ಡ್ ಹಾಕಿದೆ. ಕಾಂಗ್ರೆಸ್, ಜೆಡಿಎಸ್, ರೈತ ಸಂಘಗಳು, ಪ್ರಗತಿಪರ ಸಂಘಟನೆಗಳು ಸೇರಿ ಇಲ್ಲಿಯ ಜನತೆ ಕಪೋಕಲ್ಪಿತ ಸುಳ್ಳು ಹೆಸರಿನ ವ್ಯಕ್ತಿಗಳ ಬೋರ್ಡ್ ತೆಗೆಯದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿತ್ತು.

ಪ್ರಧಾನಿ ಆಗಮಿಸುವ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರತಿಭಟನೆ ಏನಾದರೂ ನಡೆದರೆ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಇದರಿಂದ ಪಕ್ಷದ ಮೇಲೆ ಮತ್ತಷ್ಟು ಕೆಟ್ಟ ಪರಿಣಾಮ ಬೀರುತ್ತೆ ಎಂದು ರಾತ್ರೋರಾತ್ರಿ ಬೋರ್ಡ್ ಬದಲಾಯಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!