ಅಪ್ಪು ಬರ್ಥ್ ಡೇ ಮೊದಲೇ ‘ಯುವರತ್ನ’ ಡೈಲಾಗ್ ಟೀಸರ್

308

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ಯುವರತ್ನ ಚಿತ್ರದ ಡೈಲಾಗ್ ಟೀಸರ್ ರಿಲೀಸ್ ಆಗ್ತಿದೆ. ಅಪ್ಪು ಬರ್ಥ್ ಡೇಗೆ ಒಂದು ದಿನ ಮೊದಲೇ ಯುವರತ್ನ ಚಿತ್ರದ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಲಾಗ್ತಿದೆ.

ಮೊದಲೆರಡು ಡಿಫರೆಂಟ್ ಪೋಸ್ಟರ್ ಮೂಲಕವೇ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿರುವ ಚಿತ್ರದ ಟೀಸರ್, ಇಂದು ಸಂಜೆ 6.03ಕ್ಕೆ ಬಿಡುಗಡೆಯಾಗ್ತಿದೆ. ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ರಿಲೀಸ್ ಆಗ್ತಿದೆ. ರಾಜಕುಮಾರ ಅನ್ನೋ ಸೂಪರ್ ಹಿಟ್ ಚಿತ್ರ ನೀಡಿದ ನಿರ್ದೇಶಕ ಸಂತೋಷ ಆನಂದರಾಮ ಹಾಗೂ ನಟ ಪುನೀತರಾಜಕುಮಾರ ಜೋಡಿಯ ಎರಡನೇ ಚಿತ್ರವಾಗಿದೆ.

ಇನ್ನು ನಾಳೆ ಅಪ್ಪು ಹುಟ್ಟು ಹಬ್ಬವಾಗಿದೆ. ಎಂದಿನಂತೆ ಈ ಬಾರಿ ಗ್ರ್ಯಾಂಡ್ ಸೆಲೆಬ್ರೇಷನ್ ಇರದೆ, ಸಿಂಪಲ್ ಆಗಿ ಆಚರಣೆ ಆಗ್ತಿದೆ. ಕರೋನಾ ಎಫೆಕ್ಟ್ ನಿಂದಾಗಿ ಅಭಿಮಾನಿಗಳ್ಯಾರು ಮನೆಗೆ ಬರುವುದು ಬೇಡ. ನಿಮ್ಮ ಆರೋಗ್ಯ ಮುಖ್ಯವೆಂದು ಹೇಳಿರುವ ಪುನೀತ, ಒಂದೊಳ್ಳೆ ಕೆಲಸ ಮಾಡಿ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!