ಪಿಗ್ಗಿ-ನಿಕ್ ರೈತರಾಗ್ತಾರಂತೆ!

354

ಬಾಲಿವುಡ್ ಹಾಗೂ ಹಾಲಿವುಡ್ ಸ್ಟಾರ್ ಜೋಡಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ರೈತರಾಗಲು ಹೊರಟ್ಟಿದ್ದಾರಂತೆ. ತಮ್ಮ ಈ ಸ್ಟಾರ್ ಗಿರಿ ಜೀವನಕ್ಕೆ ಟಾಟಾ ಹೇಳಿ, ಕೃಷಿಕನಾಗಬೇಕೆಂದು ಹಂಬಲಿಸ್ತಿದ್ದಾರೆ ಅಂತಾ ಹೇಳಲಾಗ್ತಿದೆ.

ಇತ್ತೀಚೆಗಷ್ಟೇ ನಿಕ್ ಜೋನಾಸ್ ನೀಡಿದ ಸಂದರ್ಶನವೊಂದರಲ್ಲಿ ಈ ವಿಷಯ ಹೇಳಿದ್ದಾನೆ. ನನ್ಗೆ ಮೊದಲಿನಿಂದಲೂ ಕೃಷಿಯಲ್ಲಿ ಒಲವು. ಇದನ್ನ ಪ್ರಿಯಾಂಕಾ ಜೊತೆ ಹಂಚಿಕೊಂಡೆ. ಆಕೆಯೂ ಒಪ್ಪಿಕೊಂಡಿದ್ದಾಳೆ. ಇದರಲ್ಲಿ ಅವಳಿಗೂ ಆಸಕ್ತಿಯಿದೆ ಅಂತಾ ಹೇಳಿದ್ದಾನೆ.

ಸೂಪರ್ ಸ್ಟಾರ್ ಜೋಡಿಯೊಂದು ಕೃಷಿ ಜೀವನ ಮಾಡಲು ಎಷ್ಟು ಸಾಧ್ಯ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಯಾಕಂದ್ರೆ, ಇಬ್ಬರು ದೊಡ್ಡ ಸ್ಟಾರ್ ಗಾಯಕ, ನಟಿ. ಇನ್ನು ಪ್ರಿಯಾಂಕಾ ತನ್ನ ಚಿತ್ರ ವಿಚಿತ್ರ ಡ್ರೆಸ್ ಗಳ ಮೂಲಕ ಸದಾ ಗಮನ ಸೆಳೆಯುತ್ತಾ ಬರ್ತಿದ್ದಾಳೆ. ಇಂತವರ ಹೋಗಿ ನಾಳೆ ನಾವು ಭೂಮಿಯನ್ನ ಉಳುಮೆ ಮಾಡುತ್ತೇವೆ ಅಂದ್ರೆ ನಂಬುವುದು ಕಷ್ಟ ಅನ್ನೋ ಮಾತುಗಳು ಕೇಳಿ ಬರ್ತಿವೆ.


TAG


Leave a Reply

Your email address will not be published. Required fields are marked *

error: Content is protected !!