ಹುಬ್ಬಳ್ಳಿ: ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸ್ತಿದ್ದ ಪಾರ್ಲರ್ ವೊಂದರ ಮೇಲೆ ಹುಬ್ಬಳ್ಳಿ ಪೊಲೀಸ್ರು ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯ ಪ್ರತಿಷ್ಠಿತ ಮಾಲ್ ನಲ್ಲಿರುವ ಪಾರ್ಲರ್ ಹಾಗೂ ಸ್ಪಾ ಸೆಂಟರ್ ಮೇಲೆ, ಗೋಕಲ ಠಾಣೆ ಪೊಲೀಸ್ರು ದಾಳಿ ನಡೆಸಿದಾಗ ವೇಶ್ಯಾವಾಟಿಕೆ ಚಟುವಟಿಕೆ ನಡೆಸ್ತಿರುವುದು ಕಂಡು ಬಂದಿದೆ. ಈ ಸಂಬಂಧ ಸ್ಪಾ ಸೆಂಟರ್ ಮಾಲೀಕ ಹಾಗೂ ಮೂವರು ಯುವತಿಯರನ್ನ ಬಂಧಿಸಲಾಗಿದೆ.
ಥೈಲಾಂಡ್ ಮೂಲದ ಮೂವರು ಯುವತಿಯರು ಪ್ರವಾಸಿ ವೀಸಾ ಪಡೆದು ಇಲ್ಲಿಗೆ ಬಂದಿದ್ದಾರೆ. ಇಲ್ಲಿಗೆ ಬಂದು ವೇಶ್ಯಾವಾಟಿಕೆಯಲ್ಲಿ ತೊಡಗಿದ್ರು. ಅವರನ್ನ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸ್ತಿರುವ ಮಾಹಿತಿ ಕಲೆ ಹಾಕಿದ ಪೊಲೀಸ್ರು ದಾಳಿ ನಡೆಸಿದ್ರು.
ಸಾಂದರ್ಭಿಕ ಚಿತ್ರ