ಮುಂಬೈನಲ್ಲಿ ಭಾರೀ ಮಳೆ, ಗೋಡೆ ಕುಸಿತಕ್ಕೆ 17 ಸಾವು

394

ಪುಣೆ: ಮುಂಬೈನಲ್ಲಿ ಭಾರೀ ಮಳೆಯಾಗ್ತಿದ್ದು, ಇದ್ರಿಂದ ಪುಣೆನ ಅಪಾರ್ಟ್ ಮೆಂಟ್ ವೊಂದರ ಗೋಡೆ ಕುಸಿದ ಪರಿಣಾಮ 17 ಜನರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಮಧ್ಯರಾತ್ರಿ 1.45ರ ಸುಮಾರಿಗೆ ನಡೆದಿದೆ.

ಪುಣೆಯ ಕೊಂಧ್ವಾ ಪ್ರದೇಶದಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ ಅಮಾಯಕ 17 ಜೀವಗಳು ಬಲಿಯಾಗಿವೆ. ಇದರಲ್ಲಿ ನಾಲ್ವರು ಮಕ್ಕಳು, ಓರ್ವ ಮಹಿಳೆ ಸಹ ಇದ್ದಾಳೆ. ಅಪಾರ್ಟ್ ಮೆಂಟ್ ಪಕ್ಕದಲ್ಲಿದ್ದ ಕೊಳಗೇರೆಗೆ 60 ಅಡಿ ಎತ್ತರದ ಗೋಡೆ ಅಪ್ಪಳಿಸಿದ ಪರಿಣಾಮ ಇಷ್ಟೊಂದು ಜನರ ಸಾವು ನೋವಿಗೆ ಕಾರಣವಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ಇಲಾಖೆಯ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಪಾಯಕ್ಕೆ ಸಿಲುಕಿಕೊಂಡವರ ರಕ್ಷಣೆಯಲ್ಲಿ ತೊಡಗಿದ್ದಾರೆ. ಮುಂಬೈನಲ್ಲಿ ಗುರುವಾರದಿಂದಲೇ ಭಾರೀ ಮಳೆಯಾಗ್ತಿದ್ದು, ಕಳೆದ 24 ಗಂಟೆಯಲ್ಲಿ 73.1 ಮಿಲಿಮೀಟರ್ ಮಳೆಯಾಗಿದೆ. ಇದು 2010ರ ಬಳಿ ಅತೀ ಹೆಚ್ಚಿನ ಪ್ರಮಾಣದ ಮಳೆ ದಾಖಲಾಗಿದೆ.


TAG


Leave a Reply

Your email address will not be published. Required fields are marked *

error: Content is protected !!