ಸೋಲಿನ ಹೊಡೆತದ ಜೊತೆಗೆ ಕೊಹ್ಲಿಗೆ ಮತ್ತೊಂದು ಬಿಸಿ

316

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಗುರುವಾರ ಸಂಜೆ ನಡೆದ ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಅನುಭವಿಸಿದೆ. ಈ ಟೆನ್ಷನ್ ನಡುವೆ ಆರ್ ಸಿಬಿ ಕ್ಯಾಪ್ಟನ್ ವಿರಾಟ ಕೊಹ್ಲಿಗೆ ಮತ್ತೊಂದು ಬಿಸಿ ಮುಟ್ಟಿಸಲಾಗಿದೆ.

ಯೆಸ್, ಪಂಜಾಬ್ ವಿರುದ್ಧ ಆಡಿದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ನಿಂದಾಗಿ ಓವರ್ ರೇಟ್ ನಾಯಕ ಕೊಹ್ಲಿ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಐಪಿಎಲ್ ನಲ್ಲಿ ಮೊದಲ ಕ್ಯಾಪ್ಟನ್ ನಿಧಾನ ಓವರ್ ರೇಟಿಂಗ್ ಘಟನೆ ನಡೆದಿದೆ.

ಇನ್ನು ಗುರುವಾರ ಸಂಜೆ ನಡೆದ ಪಂದ್ಯದಲ್ಲಿ ಪಂಜಾಬ್ ನೀಡಿದ್ದ 206 ರನ್ ಗಳ ಬಿಗ್ ಟಾರ್ಗೆಟ್ ಮುಂದೆ ಆರ್ ಸಿಬಿ ಕೇವಲ 109 ರನ್ ಗಳಿಗೆ ಆಲೌಟ್ ಆಗಿ ಸೋಲು ಅನುಭವಿಸಿದೆ. ಎರಡು ಬಾರಿ ಕೆ.ಎಲ್ ರಾಹುಲ ಕ್ಯಾಚ್ ಬಿಟ್ಟಿದ್ದು ಆರ್ ಸಿಬಿಗೆ ದೊಡ್ಡ ಪೆಟ್ಟು ನೀಡಿತು.




Leave a Reply

Your email address will not be published. Required fields are marked *

error: Content is protected !!