ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸಜನಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಶರ್ಮಿಳಾ ಮಾಂಡ್ರೆ ಮುಂದೆ ನವಗ್ರಹ, ಕೃಷ್ಣ, ವೆಂಕಟ ಇನ್ ಸಂಕಟ, ಗಾಳಿಪಟ-2 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸೌಥ್ ಸಿನಿಮಾ ಲೋಕದಲ್ಲಿ
ಸಜನಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಶರ್ಮಿಳಾ ಮಾಂಡ್ರೆ ಮುಂದೆ ನವಗ್ರಹ, ಕೃಷ್ಣ, ವೆಂಕಟ ಇನ್ ಸಂಕಟ, ಗಾಳಿಪಟ-2 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸೌಥ್ ಸಿನಿಮಾ ಲೋಕದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಸಿನಿಮಾ ನರ್ಮಾಪಕಿಯಾಗಿ ಸಹ ನಟಿ ಶರ್ಮಿಳಾ ಕಾಣಿಸಿಕೊಂಡಿದ್ದಾರೆ.

ಸಿಲ ನೋಡಿಗಳಿಲ್ ಎನ್ನುವ ತಮಿಳು ಚಿತ್ರಕ್ಕೆ ನಟಿ ಶರ್ಮಿಳಾ ಕ್ರಿಕಯೇಟಿವ್ ಪ್ರೊಡ್ಯೂಸರ್ ಆಗಿದ್ದಾರೆ. ಪುನ್ನಗೈ ಪೂ ಗೀತಾ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಟ ರಿಚರ್ಡ್ ರಿಶಿ, ಪುನ್ನಗೈ ಪೂ ಗೀತಾ, ಯಶಿಕಾ ಆನಂದ್ ಲೀಡ್ ರೋಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮುಂದಿನ ನಿಲ್ದಾಣ ಎನ್ನುವ ಚಿತ್ರ ನಿರ್ದೇಶನ ಮಾಡಿರುವ ವಿನಯ್ ಸಿಲ ನೋಡಗಳಿಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನವೆಂಬರ್ 24ರಂದು ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.