ಶಿವಣ್ಣ ಪೈಲೆಟ್ ಲುಕ್ ಸಿಕ್ರೇಟ್ ಏನು?

134

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಹ್ಯಾಟ್ರಿಕ್ ಹೀರೋ, ಸಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ಪೈಲೆಟ್ ಲುಕ್ ಕಳೆದ ಎರಡ್ಮೂರು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಯಾವ ಚಿತ್ರಕ್ಕಾಗಿ ಶಿವಣ್ಣ ಪೈಲೆಟ್ ರೋಲ್ ಮಾಡುತ್ತಿದ್ದಾರೆ ಅಂತಾ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಇನ್ನೊಂದು ಕಡೆ ತಮಿಳಿನ ನಟ ಧನುಷ್ ಜೊತೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಅದೇ ಚಿತ್ರದ ಪಾತ್ರ ಇರಬೇಕು ಎಂದುಕೊಂಡಿದ್ದಾರೆ. ಆದರೆ, ಶಿವಣ್ಣನ ಈ ಗೆಟಪ್ ಆ ಚಿತ್ರದ್ದು ಅಲ್ಲವೆಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಶಿವಣ್ಣನ ಪೈಲೆಟ್ ಲುಕ್ ಹಿಂದಿನ ಕಾರಣ ಜಾಹೀರಾತು.

ಹೌದು, ನಟ ಶಿವರಾಜಕುಮಾರ್ ಜಾಹೀರಾತುವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಫೋಟೋವೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಮತ್ತೊಂದು ಫೋಟೋ ಬಿಡುಗಡೆಯಾಗಿದೆ. ಅದರಲ್ಲಿ ಶಿವಣ್ಣನ ಜೊತೆಗೆ ಗಗನಸಖಿ ಇದ್ದಾರೆ. ಹೀಗಾಗಿ ಇದು ಜಾಹೀರಾತಿನಲ್ಲಿ ಕಾಣಿಸಿಕೊಂಡ ಲುಕ್ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!